ವಿಧಾನಸಭೆಯಲ್ಲಿ ಪಾನ್​ ಮಸಾಲ ತಿಂದು ಉಗುಳಿದ ಶಾಸಕ!; ಸ್ಪೀಕರ್ ಕೊಟ್ಟ ಎಚ್ಚರಿಕೆ ಹೀಗಿದೆ.. | Assembly Speaker

Untitled design (84)
Published on

ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ಅಧಿವೇಶನದ 9ನೇ ದಿನವಾದ ಇಂದು ಮಂಗಳವಾರ(ಮಾರ್ಚ್​​ 04) ಅಧಿವೇಶನ ಪ್ರಾರಂಭವಾಯಿತು. ವಿಧಾನಸಭಾ ಸ್ಪೀಕರ್(Assembly Speaker) ಸತೀಶ್ ಮಹಾನ ಅವರು ಕುರ್ಚಿಯ ಮೇಲೆ ಕುಳಿತು ಒಂದು ಘಟನೆಯನ್ನು ವಿವರಿಸಿದರು. ಕೆಲವು ಶಾಸಕರು ಸದನದಲ್ಲಿಯೇ ಪಾನ್ ಮಸಾಲ ತಿಂದು ಉಗುಳಿದ್ದಾರೆ. ಇದು ಅಶಿಸ್ತು ಎಂದು ಪಾನ್ ಮಸಾಲ ಉಗುಳಿದ ಶಾಸಕರ ಹೆಸರನ್ನು ಬಹಿರಂಗಪಡಿಸದೆ ತರಾಟೆಗೆ ತೆಗೆದುಕೊಂಡರು.

ಸದನ ಆರಂಭವಾಗುವ ಮೊದಲು ಸದಸ್ಯರನ್ನುದ್ದೇಶಿಸಿ ಮಾತನಾಡಿದ ಸತೀಶ್ ಮಹಾನಾ, ನಮ್ಮ ಗೌರವಾನ್ವಿತ ಸದಸ್ಯರಲ್ಲಿ ಒಬ್ಬರು ವಿಧಾನಸಭಾ ಸಭಾಂಗಣದಲ್ಲಿ ಪಾನ್ ಮಸಾಲ ತಿಂದು ನಂತರ ಅಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಇಂದು ಬೆಳಗ್ಗೆ ನನಗೆ ತಿಳಿಸಲಾಯಿತು ಎಂದು ಹೇಳಿದರು. ಇದನ್ನು ಕೇಳಿದ ನಂತರ ನಾನು ಇಲ್ಲಿಗೆ ಬಂದು ಸ್ಥಳವನ್ನು ಸ್ವಚ್ಛಗೊಳಿಸಿದೆ. ಭವಿಷ್ಯದಲ್ಲಿ ತಮ್ಮ ಸಹೋದ್ಯೋಗಿಗಳು ಯಾರಾದರೂ ಹೀಗೆ ಮಾಡುವುದನ್ನು ನೋಡಿದರೆ, ಅವರನ್ನು ತಡೆಯಬೇಕೆಂದು ನಾನು ಎಲ್ಲಾ ಸದಸ್ಯರನ್ನು ವಿನಂತಿಸುತ್ತೇನೆ. ಇದು ನಮ್ಮೆಲ್ಲರ ಸಭೆ, ಕೇವಲ ಸ್ಪೀಕರ್ ಅವರ ಸಭೆಯಲ್ಲ. ಅದನ್ನು ಸ್ವಚ್ಛ ಮತ್ತು ಘನತೆಯಿಂದ ಇಡುವುದು ಎಲ್ಲಾ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 5ರವರೆಗೆ ನಡೆಯಲಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡೂ ಮಾರ್ಚ್ 5ರವರೆಗೆ ಕಾರ್ಯನಿರ್ವಹಿಸಲಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net