

ವಾರಾಣಸಿ: ನಿರಂತರ ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡಿರುವ ಉತ್ತರ ಪ್ರದೇಶ ವಾರಾಣಸಿ ಮೂಲದ ದಂಪತಿ ಎರಡು ವಾರಗಳ ಹಿಂದೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರಿಂದ ಬಂಧನವಾಗಿದ್ದರು. ಈ ವೇಳೆ ಅವರ 14 ತಿಂಗಳ ಹೆಣ್ಣು ಮಗು ಪಾಲಕರಿಲ್ಲದೇ ಒಂಟಿಯಾಗಿತ್ತು. ಇದೀಗ ಎರಡು ವಾರಗಳ ಬಳಿಕ ದಂಪತಿಗೆ ಜಾಮೀನು ದೊರಕಿದ್ದು, ಇಂದು ಬಿಡುಗಡೆಯಾದ ಅವರು ಮಗುವನ್ನು ಅಪ್ಪಿ ಮುದ್ದಾಡಿದ್ದಾರೆ. ಮಗುವಿನ ಮೊಗದಲ್ಲೂ ಸಂತಸ ಮೂಡಿದೆ.
ಡಿಸೆಂಬರ್ 19ರಂದು ವಾರಾಣಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 60ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ಪ್ರಸಿದ್ಧ ಸಾಮಾಜಿಕ ಹೋರಾಟಗಾರರು ಆಗಿರುವ ರವಿ ಶೇಖರ್ ಮತ್ತು ಎಕ್ತಾ ದಂಪತಿಯು ಸೇರಿದ್ದರು. ಈ ದಂಪತಿ ವಾಯುಮಾಲಿನ್ಯ ಮೇಲೆ ಬೆಳಕು ಚೆಲ್ಲುವ ಕ್ಲೈಮೆಟ್ ಅಜೆಂಡಾ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ. ವಾರಾಣಸಿ ಭಾರತ ಅತ್ಯಂತ ಹೆಚ್ಚು ಮಾಲಿನ್ಯಾಕಾರಿನ ನಗರವಾಗಿದೆ.
ಬುಧವಾರ ರಾತ್ರಿ ಎಕ್ತಾ ಮತ್ತು ರವಿಶೇಖರ್ ದಂಪತಿ ಸೇರಿದಂತೆ ಬನಾರಸ್ ಹಿಂದು ವಿಶ್ವವಿದ್ಯಾಲಯದ ಡಜನ್ಗಟ್ಟಲೇ ವಿದ್ಯಾರ್ಥಿಗಳಿಗೂ ಜಾಮೀನು ನೀಡಲಾಗಿದೆ. ಎರಡು ವಾರಗಳ ಬಳಿಕ ಜಾಮೀನು ಸಿಕ್ಕಿದ ಖುಷಿಯಲ್ಲಿ ತಮ್ಮ ಮಗುವನ್ನು ನೋಡಲು ದಂಪತಿ ಓಡೋಡಿ ಬಂದಿದ್ದರು. ಈ ಬಗ್ಗೆ ಮಾತನಾಡಿರುವ ಎಕ್ತಾ ಶೇಖರ್, ನನ್ನ ಮಗಳು ಛಂಪಾಕ್ ಅಥವಾ ಐರಾ ನನ್ನ ಎದೆ ಹಾಲಿಗೆ ಅವಲಂಬಿತವಾಗಿದ್ದಳು. ಹೀಗಾಗಿ ಜೈಲಿನಲ್ಲಿದ್ದಾಗ ನಾನು ಚಿಂತಾಕ್ರಾಂತಳಾಗಿದ್ದೆ. ನಿಜಕ್ಕೂ ನನಗೆ ಕಷ್ಟದ ಸಮಯವಾಗಿತ್ತು ಎಂದು ಹೇಳಿದ್ದಾರೆ.
ಸಂಘಟನೆಯೊಂದು ಆಯೋಜಿಸಿದ್ದ ಪ್ರತಿಭಟನಾ ವೇಳೆ ಎಕ್ತಾ ಮತ್ತು ರವಿಶೇಖರ್ ದಂಪತಿಯನ್ನು ಯುಪಿ ಪೊಲೀಸರು ಡಿಸೆಂಬರ್ 19ರಂದು ಬಂಧಿಸಿದ್ದರು. ದಂಪತಿ ಜೈಲಿನಲ್ಲಿದ್ದ ವೇಳೆ ಮಗುವನ್ನು ಸಂಬಂಧಿಕರು ನೋಡಿಕೊಳ್ಳುತ್ತಿದ್ದರು. (ಏಜೆನ್ಸೀಸ್)