ಧಗ ಧಗನೆ ಹೊತ್ತಿ ಉರಿದ ಕಾರು, 8 ಮಂದಿ ಸುಟ್ಟು ಭಸ್ಮ

UP Accident
Published on

ಉತ್ತರಪ್ರದೇಶ: ಕಾರಿಗೆ ಬೆಂಕಿ ತಗುಲಿ ಮದುವೆಗೆ ತೆರಳುತ್ತಿದ್ದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಭೋಜಿಪುರ ಬಳಿಯ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಭೋಜಿಪುರ ಪೊಲೀಸ್ ಠಾಣೆ ಬಳಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಮಗು ಸೇರಿದಂತೆ ಕಾರಿನಲ್ಲಿದ್ದ ಎಂಟು ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದವರು ಬರೇಲಿ ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಕಾರಿನಿಂದ ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ಮತ್ತು ಟ್ರಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಭಯಾನಕ ವಿಡಿಯೋ ಅಂತರ್ಜಾಲದಲ್ಲಿ  ವೈರಲ್​ ಆಗುತ್ತಿದೆ. 

ಈ ಕುರಿತಾಗಿ ಮಾತನಾಡಿದ ಪೊಲೀಸ್ ಅಧಿಕಾರಿ, ಕಾರು, ಟ್ರಕ್​ ಡಿಕ್ಕಿ ಹೊಡೆದು ಒಂದು ಮಗು ಸೇರಿದಂತೆ ಎಂಟು ಜನರು ತಮ್ಮ ಕಾರಿನಲ್ಲಿ ಸುಟ್ಟು ಕರಕಲಾದರು. ಮದುವೆಯೊಂದರಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ಕಾರು ಲಾಕ್ ಆಗಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜ್ವಾಲೆಯು ನಿಯಂತ್ರಣಕ್ಕೆ ಬರುವಷ್ಟರಲ್ಲಿ ಹೆಚ್ಚಿನ ಸಂತ್ರಸ್ತರು ಬೆಂಕಿಗೆ ತುತ್ತಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಿಂದ  ಸಂಚಾರ ದಟ್ಟಣೆ ಉಂಟಾಗಿದೆ. ಕ್ರೇನ್ ಮೂಲಕ ಕಾರು ಮತ್ತು ಟ್ರಕ್ ರಸ್ತೆಯಿಂದ ತೆಗೆದುಹಾಕಲಾಯಿತು. ಮೃತದೇಹಗಳನ್ನು ಸುಮಾರು 1 ಗಂಟೆಯ ನಂತರ ಹೊರತೆಗೆಯಲಾಯಿತು, ಇದು ಸಾಮಾನ್ಯ ಸಂಚಾರವನ್ನು ಪುನರಾರಂಭಿಸಲು ಅನುವು ಮಾಡಿಕೊಡಲಾಯಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net