

ನನಗೆ 21 ವರ್ಷ. ನಾಲ್ಕು ವರ್ಷಗಳ ಹಿಂದೆ, ಪಿಯುಸಿ ಓದುತ್ತಿದ್ದಾಗ ನನಗಿಂತ 11 ವರ್ಷ ದೊಡ್ಡವನಾದ ಸೋದರಮಾವನ ಜತೆ ಮದುವೆಯಾಯಿತು. ಆತ ದಿನವೂ ಕುಡಿದು ಬಂದು ನನ್ನನ್ನು ಹೊಡೆಯುವುದು, ಬಯ್ಯುವುದು ನಡೆದೇ ಇತ್ತು. ಅವನಿಗೆ ಉದ್ಯೋಗವೂ ಇರಲಿಲ್ಲ. ನನ್ನ ತವರಿನಲ್ಲಿ ಕೊಟ್ಟ ಹಣವನ್ನು ಕುಡಿತಕ್ಕೆ ಬಳಸುತ್ತಿದ್ದ. ಒಂದು ವರ್ಷ ಸಹಿಸಿ ಕಡೆಗೆ ತವರಿಗೆ ಬಂದುಬಿಟ್ಟೆ. ಹಾಗೆ ಬರುವಾಗ ಯಾವುದೋ ಪತ್ರಕ್ಕೆ ಸಹಿಹಾಕು ಎಂದ. ಸದ್ಯ ನನಗೆ ಅಲ್ಲಿಂದ ಬಿಡುಗಡೆ ಸಿಕ್ಕರೆ ಸಾಕೆಂದು ಸಹಿ ಹಾಕಿದೆ. ಆತ ಮತ್ತೆ ಕರೆಯಲು ಬಂದಾಗ ನನ್ನ ಕಷ್ಟ ಅರಿತ ಹೆತ್ತವರು ಕಳಿಸಲಿಲ್ಲ. ಮತ್ತೆ ಕಾಲೇಜಿಗೆ ಸೇರಿ ಓದುತ್ತಿದ್ದೇನೆ. ನಾನು ಪಿಯುಸಿಯಲ್ಲಿದ್ದಾಗ ಒಬ್ಬ ಹುಡುಗ ನನ್ನನ್ನು ಪ್ರೀತಿಸುತ್ತಿದ್ದ. ಮದುವೆಯಾದ ನಂತರ ಅವನ ಜತೆ ಮಾತಾಡಿಲ್ಲ. ಆದರೆ ಅವನು ತುಂಬಾ ಒಳ್ಳೆಯ ಹುಡುಗ ಮತ್ತು ಒಳ್ಳೆಯ ಕೆಲಸದಲ್ಲಿದ್ದಾನೆ. ಈ ಮಧ್ಯೆ ನನ್ನ ಪದವಿ ಮುಗಿದ ಮೇಲೆ ನನ್ನ ತಂದೆತಾಯಿ ಮತ್ತೆ ನನಗೆ ಮದುವೆ ಮಾಡಲು ಹವಣಿಸುತ್ತಿದ್ದಾರೆ. ನನಗೀಗ ದ್ವಂದ್ವ ಕಾಡುತ್ತಿದೆ. ನಾನೂ ಕೆಲಸಕ್ಕೆ ಸೇರಿ ನನ್ನನ್ನು ಮೊದಲು ಪ್ರೀತಿಸುತ್ತಿದ್ದ ಹುಡುಗನೊಡನೆ ಮಾತಾಡಿ ಅವನು ಒಪ್ಪಿದರೆ ಅವನನ್ನೆ ಮದುವೆಯಾಗಲಾ ಅಥವಾ ನನ್ನ ತಂದೆತಾಯಿ ನೋಡಿದ ಹುಡುಗನನ್ನೇ ಮದುವೆಯಾಗಲಾ? ಒಮ್ಮೆ ಇವರು ನೋಡಿದವನನ್ನು ಮದುವೆಯಾಗಿ ಪಟ್ಟ ಕಷ್ಟ ನೆನೆಸಿಕೊಂಡರೆ, ಮತ್ತೊಮ್ಮೆ ಅದೇ ರೀತಿಯ ಗಂಡ ಸಿಕ್ಕಿಬಿಟ್ಟರೆ ಅಂತ ಹೆದರಿಕೆಯಾಗುತ್ತದೆ. ಈ ಚಿಂತೆಗಳಿಂದ ಓದುವುದೂ ಕಷ್ಟವಾಗುತ್ತಿದೆ.ಪರೀಕ್ಷೆಯಲ್ಲಿ ಫೇಲ್ ಆಗುವ ಭಯವೂ ಕಾಡುತ್ತಿದೆ. ಏನು ಮಾಡಲಿ ತಿಳಿಸಿ.