ಅಮಾನಿ ಕೆರೆಯಲ್ಲಿ ಅವೈಜ್ಞಾನಿಕ ಕಾಮಗಾರಿ

klr dpr
ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ಸುದ್ದಿ.
Published on

ಕೋಲಾರ: ನಗರ ಸಮೀಪದ ಕೋಲಾರಮ್ಮ ಅಮಾನಿ ಕೆರೆಯಲ್ಲಿ ಸಿಎಸ್‌ಆರ್ ಯೋಜನೆಯಡಿ ಖಾಸಗಿ ಸಂಸ್ಥೆಯವರು ಕೈಗೊಂಡಿರುವ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಕ್ರಮಕೈಗೊಳ್ಳುವಲ್ಲಿ ಸಂಬಂಧಪಟ್ಟ ಇಲಾಕಾಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಇನೋಸಿಸ್ ಸಂಸ್ಥೆಯು ಸಿಎಸ್‌ಆರ್ ಅನುದಾನದಲ್ಲಿ 17 ಕೋಟಿಗೂ ಅನುದಾನ ಬಿಡುಗಡೆಗೊಳಿಸಿದ್ದು, ಕೆರೆಯ ಅಭಿವೃದ್ಧಿ ಜವಾಬ್ದಾರಿಯನ್ನು ಆನಂದ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಗೆ ಒಪ್ಪಿಸಿದೆ.
ಕಾಮಗಾರಿಗೂ ಮುಂಚೆ ಸಕ್ಷಮ ಪ್ರಾಧಿಕಾರದಿಂದ ಡಿಪಿಆರ್‌ಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆಯುವಂತೆ ಸೂಚಿಸಿಲಾಗಿತ್ತು. ಆದರೆ, ಕೆರೆ ಸಂರಕ್ಷಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಬಗ್ಗೆ ದೂರುಗಳು ಬಂದರೂ ಜಿಲ್ಲಾಡಳಿತ ಮಾತ್ರ ಕ್ರಮಕೈಗೊಳ್ಳದಿರುವುದು ಕಂಡುಬAದಿದೆ.
ಕಾಮಗಾರಿಯ ಜವಾಬ್ದಾರಿ ವಹಿಸುವಂತಹ ಸಂದರ್ಭದಲ್ಲಿ ಸರ್ಕಾರ ಕಾಮಗಾರಿ ನಿರ್ವಹಿಸುವ ಸಂಸ್ಥೆಗೆ ಹಲವು ಸೂಚನೆಗಳನ್ನು ನೀಡಿದೆ. ಆದರೆ, ಸಂಸ್ಥೆಯವರು ಕಾಮಗಾರಿ ಪ್ರಾರಂಭಿಸುವ ಮುನ್ನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಽಕಾರದಿಂದ ಅನುಮತಿ ಪಡೆದಿಲ್ಲ, ಡಿಪಿಆರ್‌ಗೆ ಅನುಮೋದನೆ ಪಡೆಯದೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಈ ಕಾಮಗಾರಿಯಲ್ಲಿ ನಿರ್ವಹಿಸುತ್ತಿರುವ ನ್ಯೂನತೆಗಳ ಬಗ್ಗೆ ವಿಜಯವಾಣಿಯಲ್ಲಿ 2023ರ ನವೆಂಬರ್ 2ರಂದು ವರದಿ ಪ್ರಕಟಿಸಲಾಗಿತ್ತು. ಜತೆಗೆ ಸಾರ್ವಜನಿಕರಿಂದಲೂ ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು. ಆದ್ದರಿಂದ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದರೂ ಸಹ ನಿರ್ಲಕ್ಷ್ಯ ತೋರಿದ್ದಾರೆ.
ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಕೋಲಾರದ ಅಮಾನಿಕೆರೆಯಲ್ಲಿ ಸಿಎಸ್‌ಆರ್ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಹೆಚ್ಚು ಮಳೆ ಬಂದು ಕೆರೆ ನೀರು ಹರಿದು ತುಂಬಿದಾಗ ಕೆರೆಗೆ ಹೊಂದಿರುವ ಸುತ್ತ-ಮುತ್ತಲಿನ ನಿವಾಸಿಗಳಿಗೆ ಅಗಬಹುದಾದ ಅಪಾಯ ತಪ್ಪಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರರ್ಜಿಯ ಸಂಕ್ಷಿಪ್ತ ವಿಷಯವಾಗಿದ್ದು, ಈ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರಿನ ಸಣ್ಣ ನೀರಾವರಿ ವೃತ್ತ ಅಧೀಕ್ಷಕ ಇಂಜನಿಯರ್‌ಗೆ ಆಯೋಗದ ಅಧಿಕಾರಿಗಳು ಪತ್ರ ರವಾನಿಸಿದ್ದರು.
ಅಮಾನಿ ಕೆರೆಯಲ್ಲಿ ಸಿಎಸ್‌ಆರ್ ಅನುದಾನದಡಿ ಕೈಗೊಳ್ಳಲು ಆನಂದ್ ಮಲ್ಲಿಗವಾಡ್ ಫೌಂಡರ್ ಮತ್ತು ಟ್ರಸ್ಟಿ ಮಲ್ಲಿಗವಾಡ್ ಫೌಂಡೇಷನ್ ಸಂಸ್ಥೆಯವರು ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ರವರಿಗೆ ಇನೋಸಿಸ್ ಸಂಸ್ಥೆಯಿಂದ ಸಿಎಸ್‌ಆರ್ ನಿಧಿಯಡಿ ಕೆರೆ ಪುನರುಜ್ಜೀವನಗೊಳಿಸಲು ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಹಾಗೂ ನಗರಸಭೆಯ ಅಽಕಾರಿಗಳೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ ನಡೆದ ತಾಂತ್ರಿಕ ಚರ್ಚೆಯಂತೆ ಕೆರೆಯ ಮೇಲ್ಬಾಗ ಹಾಗೂ ಕೆಳಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಒಪ್ಪಿ ನಿರಾಕ್ಷೇಪಣಾ ಪತ್ರ ನೀಡಲು ಕೋರಿದ್ದರು. ಅದರಂತೆ ಕರ್ನಾಟಕ ಕೆರೆ ಸಂರಕ್ಷಾ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆದು, ಅನುಮೋದಿತ ಯೋಜನಾ ವರದಿಯನ್ನು ವಿಭಾಗಕ್ಕೆ ಕಲ್ಲಿಸಲು ತಿಳಿಸಲಾಗಿತ್ತು. ಆದರೆ ಕಾಮಗಾರಿ ಪಡೆದುಕೊಂಡಿರುವ ಸಂಸ್ಥೆ ಬೇಜವಾಬ್ದಾರಿತನ ತೋರಿದ್ದಾರೆ.
ಕಾಮಗಾರಿ ನಿಲ್ಲಿಸಲು ಹಲವು ಬಾರಿ ಸೂಚಿಸಿದ್ದರೂ ಬೇಜವಾಬ್ದಾರಿತನ ತೋರಿಸಿದ್ದಾರೆ. ಅಮಾನಿಕೆರೆ ಸುತ್ತಲೂ ಅವೈಜ್ಞಾನಿಕವಾಗಿ ಬಂಡ್ ನಿರ್ಮಿಸಲಾಗುತ್ತಿದೆ. ಸದರಿ ಬಂಡ್ ನಿರ್ಮಿಸಲು ಕೆರೆಯಲ್ಲಿನ ಹೂಳು ಉಪಯೋಗಿಸಲಾಗುತ್ತಿದೆ. ಮಣ್ಣಿನ ಸಾಂದ್ರತೆ ಕೂಡ ಪರೀಕ್ಷಿಸಿರುವುದಿಲ್ಲ. ಕೆರೆಯ ಮೂಲ ಮಣ್ಣನ್ನು ಸಹ ತೆಗೆಯಲಾಗಿದ್ದು, ಸಿಪೇಜ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಸಂಸ್ಥೆಯವರಿಗೆ ತಿಳಿಸಿ ನೋಟಿಸ್ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net