

ಬನ್ನೂರು: ಅಂತಾರಾಷ್ಟ್ರೀಯ ಭೌದ್ಧ ಮಹಾ ಸಮ್ಮೇಳನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ ಜತೆಗೆ, ಅಭೂತಪೂರ್ವ ಯಶಸ್ಸನ್ನು ತಂದು ಕೊಟ್ಟ ಕೀರ್ತಿ ಪುರುಷೋತ್ತಮ್ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ಸಿದ್ದೇಶ್ವರ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಮೈಸೂರಲ್ಲಿ ನಡೆದ ಅಂತರಾಷ್ಟ್ರೀಯ ಭೌದ್ದ ಮಹಾ ಸಮ್ಮೇಳನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಮಾರ್ಗದರ್ಶನ ನೀಡಿದ ಪುರುಷೋತ್ತಮ್ ಅವರನ್ನು ಬನ್ನೂರು ಹೋಬಳಿ ಮತ್ತು ಚಾಮರಾಜನಗರದ ಸ್ನೇಹಿತರು ಸನ್ಮಾನಿಸಿದ ನಂತರ ಅವರು ಮಾತನಾಡಿದರು.
ಇದೊಂದು ಬಾಬಾ ಸಾಹೇಬರ ಅನುಯಾಯಿಗಳಿಗೆ ದಿಕ್ಸೂಚಿಯಾಗಿ, ಗೌತಮ ಬುದ್ಧರ ಮೌಲ್ಯಯುತವಾದ ಚಿಂತನೆಗಳು, ಆಶಯಗಳನ್ನು ಜನಮಾನಸದಲ್ಲಿ ಹಚ್ಚೊತ್ತಿದ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್ ಮಾತನಾಡಿ, ಭೌದ್ಧ ಮಹಾ ಸಮ್ಮೇಳನವು ಅಭೂತಪೂರ್ವ ಯಶಸ್ಸು ಕಂಡಿದ್ದು, ಅದಕ್ಕೆ ಪುರುಷೋತ್ತಮ ಅವರ ಪರಿಶ್ರಮ ದೂರದೃಷ್ಟಿಯ ನಾಯಕತ್ವ ಕಾರಣ ಎಂದರು. ರಾಷ್ಟ್ರದ ಗಮನ ಸೆಳೆದ ಭೌದ್ದ ಮಹಾ ಸಮ್ಮೇಳನವು ನಮ್ಮೋಳಗಿನ ಅಜ್ಞಾನವನ್ನು ಹೋಗಲಾಡಿಸಿ, ಧರ್ಮದ ಬೆಳಕನ್ನು ಹೆಚ್ಚಿಸಿದ ವಿಶಿಷ್ಟ ರೀತಿಯ ಕಾರ್ಯಕ್ರಮ ಎಂದರು.
ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಿ.ಕೆ.ಜ್ಞಾನಪ್ರಕಾಶ್ , ಶಿಕ್ಷಕ ಸಿದ್ದೇಶ್ವರ್, ಜೈ ಭೀಮ್ ಹೋರಾಟ ಸಮಿತಿಯ ತಾಲ್ಲುಕು ಅಧ್ಯಕ್ಷ ರಾಘವೇಂದ್ರ, ಕಾಂಗ್ರಸ್ ಮುಖಂಡ ಎಲ್.ಪಿ.ಮನು, ಬೀಡನಹಳ್ಳಿ ಮಹದೇವ, ಬಸವನಹಳ್ಳಿ ಮಹದೇವ, ಯಡಳ್ಳಿ ಪುಟ್ಟರಾಜು, ಜೈ ಮುತ್ತು, ಶ್ರೀನಿವಾಸ, ಬಿ.ಎಂ.ಜೈ ಕುಮಾರ್, ಬಿ.ಡಿ.ಕಿರಣ್‌ಕುಮಾರ್, ಬಸವಣ್ಣ, ರಂಗರಾಜು, ಪ್ರವೀಣ್‌ಕುಮಾರ, ಪರಶಿವಮೂರ್ತಿ, ಗಜೇಂದ್ರ, ಸುಂದರ್, ಪುರಸಭಾ ಮಾಜಿ ಸದಸ್ಯ ಬಿ.ಬೈರವಮೂರ್ತಿ, ಮೊರಾರ್ಜಿ ಶಾಲಾ ಮುಖ್ಯಶಿಕ್ಷಕ ಅತ್ತಳ್ಳಿ ಲೋಕೇಶ್, ಸಿದ್ದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.