ಸಾರ್ವಜನಿಕ ಶೌಚಗೃಹಗಳ ಬೀಗ ತೆರೆಯಿರಿ

protest
ಶಿವಮೊಗ್ಗದಲ್ಲಿ ಸಾರ್ವಜನಿಕ ಶೌಚಗೃಹಗಳ ಅವ್ಯವಸ್ಥೆ ಖಂಡಿಸಿ ತೀ.ನ.ಶ್ರೀನಿವಾಸ, ಎಸ್.ವಿ.ರಾಜಮ್ಮ, ಹನುಮಂತಪ್ಪ, ಚನ್ನವೀರಪ್ಪ ಗಾಮನಗಟ್ಟಿ, ಶಿವಲಿಂಗಪ್ಪ, ಪರಶುರಾಮ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ನಗರದಲ್ಲಿನ ಸಾರ್ವಜನಿಕ ಶೌಚಗೃಹಗಳಿಗೆ ಬೀಗ ಹಾಕಲಾಗಿದ್ದು, ಅವುಗಳನ್ನು ಸಾರ್ವಜನಿಕ ಬಳಕೆಗೆ ತೆರೆಯಬೇಕೆಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಸಾರ್ವಜನಿಕ ಶೌಚಗೃಹಗಳಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ವಿವಿಧೆಡೆ ನಗರ ಪಾಲಿಕೆಯಿಂದ ಉಚಿತ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆ. ಹಲವೆಡೆ ಹಣ ಪಡೆಯಲಾಗುತ್ತಿದೆ. ಇನ್ನು ಕೆಲ ಶೌಚಗೃಹಗಳಿಗೆ ಬೀಗ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಮಹಿಳೆ ಹಾಗೂ ಪುರುಷರಿಗೆ ಉಚಿತ ಶೌಚಗೃಹದಲ್ಲಿ ಮೂತ್ರ ವಿಸರ್ಜನೆಗೆ 2 ರೂ. ನಿಗದಿ ಮಾಡಿದ್ದರೂ ಕೆಲವೊಮ್ಮೆ 10 ರೂ. ಪಡೆಯಲಾಗುತ್ತಿದೆ. ಇಷ್ಟಾದರೂ ಅಲ್ಲಿ ಸ್ವಚ್ಛತೆ ಇಲ್ಲ. ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಶೌಚಗೃಹಗಳನ್ನು ಬೇಗನೆ ನಿರ್ಮಿಸಿ ಟೆಂಡರ್ ಕರೆದು ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ತೀ.ನ.ಶ್ರೀನಿವಾಸ, ಚನ್ನವೀರಪ್ಪ ಗಾಮನಗಟ್ಟಿ, ಶಿವಲಿಂಗಪ್ಪ, ಹನುಮಂತಪ್ಪ, ಎಸ್.ವಿ.ರಾಜಮ್ಮ, ಪರಶುರಾಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net