ಕ್ಯಾಂಪಸ್​ನಲ್ಲಿ ಸ್ನೇಹಿತೆಗೆ ಗುಂಡು ಹಾರಿಸಿ, ಬಳಿಕ ಹಾಸ್ಟೆಲ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡ ಸ್ನೇಹಿತ

Crime
Published on

ನೋಯ್ಡಾ: 21 ವರ್ಷದ ವಿದ್ಯಾರ್ಥಿನಿಯನ್ನು ಕ್ಯಾಂಪಸ್‌ನಲ್ಲೇ ಸಹಪಾಠಿಯೊಬ್ಬ ಗುಂಡಿಕ್ಕಿ ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಶಿವನಾಡರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್​ನಲ್ಲಿ ಈ ಘಟನೆ ನಡೆದಿದ್ದು, ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಅನುಜ್​ ಸಿಂಗ್​ ಹಾಗೂ ನೇಹಾ ಚೌರಾಸಿಯಾ ಮೃತ ದುರ್ದೈವಿಗಳಾಗಿದ್ದಾರೆ.

ಕೊಲೆಯ ಆಘಾತಕಾರಿ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದೃಶ್ಯದಲ್ಲಿ ಯುವಕ ಮತ್ತು ಯುವತಿ ಕ್ಯಾಂಪಸ್‌ನ ಡೈನಿಂಗ್ ಹಾಲ್‌ನ ಹೊರಗೆ ಪರಸ್ಪರ ಮಾತನಾಡುತ್ತಿದ್ದಾಗ, ಯುವಕ ಬ್ಯಾಗ್‌ನಿಂದ ಪಿಸ್ತೂಲ್ ಅನ್ನು ಹೊರತೆಗೆದು ಅವಳ ಮೇಲೆ ಗುಂಡು ಹಾರಿಸುತ್ತಾನೆ. ಅವಳು ನಂತರ ಕುಸಿದು ಬೀಳುವ ಮೂಲಕ ಅವ​ನನ್ನು ತಡೆಯಲು ಪ್ರಯತ್ನಿಸುತ್ತಾಳೆ. ನಂತರ ಯುವಕ ಮತ್ತೆ, ಅಕೆಯ ಎದೆ ಮತ್ತು ಹೊಟ್ಟೆಗೆ ಕನಿಷ್ಠ ಎರಡು ಬಾರಿ ಗುಂಡು ಹಾರಿಸಿ ತಕ್ಷಣವೇ ಸ್ಥಳದಿಂದ ಹೊರಟು ಹೋಗುತ್ತಾನೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅನುಜ್ ಮತ್ತು ನೇಹಾ ಡೈನಿಂಗ್ ಹಾಲ್‌ನ ಹೊರಗೆ ಸಂಭಾಷಣೆ ನಡೆಸುತ್ತಿರುವ ವೇಳೆ ಅವರು ಪರಸ್ಪರ ತಬ್ಬಿಕೊಂಡರು. ಈ ವೇಳೆ ಏನೋ ಮಾತಿನ ಚಕಮಕಿ ಉಂಟಾಗಿ ಆತ ನೇಹಾಳನ್ನು ಕೊಂದು, ತನ್ನ ಹಾಸ್ಟೆಲ್ ಕೋಣೆಯೊಳಗೆ ಹೋಗಿ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net