

ಮಾರಕ ರೋಗ ಕೋವಿಡ್-19 ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಬಾಧಿಸುತ್ತಿದೆ. ಅದು ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ ಮನೆಯಲ್ಲೇ ಇರುವುದು. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವದ ನೂರಕ್ಕೂ ಹೆಚ್ಚು ದೇಶಗಳು ಲಾಕ್ಡೌನ್ ಘೊಷಿಸಿವೆ. ಇದಕ್ಕೆ ಆಸ್ಟ್ರಿಯಾ ದೇಶ ಕೂಡ ಹೊರತಾಗಿಲ್ಲ. 'Stay Home' (ಮನೆಯಲ್ಲೇ ಇರಿ) ಸಂದೇಶ ಬಹಳ ಜನರಿಗೆ ತಲುಪುವಂತೆ ಕೆಲವರು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಆಸ್ಟ್ರಿಯಾದ ಅನಾಮಧೇಯ ಪೈಲಟ್ ಒಬ್ಬರು ಖಖಅ ಏಣMಉ ಎಂಬ ಅಕ್ಷರಗಳು ಮೂಡುವ ರೀತಿಯಲ್ಲಿ ತಮ್ಮ ವಿಮಾನ ಹಾರಾಟವನ್ನು ನಡೆಸಿದ್ದಾರೆ. ನಂತರ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಜನರೆಲ್ಲ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.