ಮಲ್ಲಿಕಾರ್ಜುನ ಖರ್ಗೆಯವರೇ ನಮಗಲ್ಲ ನಿಮ್ಮ ‘ಪಪ್ಪು’ವಿಗೆ ಉಪನ್ಯಾಸ ನೀಡಿ; ಸಚಿವ ರವನೀತ್ ಸಿಂಗ್

Untitled-design-2024-09-15T204201.531-1
Published on

ಪಾಟ್ನಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಕಾಂಗ್ರೆಸ್​​ ರಾಹುಲ್​ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದೆ. ಆದರೆ ಅವರು ಪಪ್ಪು ಆಗಿಯೇ ಉಳಿದಿದ್ದಾರೆ ಎಂದು ಸಚಿವ ರವನೀತ್ ಸಿಂಗ್ ಬಿಟ್ಟು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಸಂಸದರಾಗಿದ್ದು, ಇಂದು ದೇಶದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆದರೆ ಪಪ್ಪು ಪಪ್ಪು ಆಗಿಯೇ ಉಳಿದಿದ್ದಾರೆ. ಪಪ್ಪು ಇನ್ನೂ ಮಗು, ಯಾರ ಕೈಯಲ್ಲಿ ಆಟವಾಡುತ್ತಿದ್ದಾನೆ ಎಂಬುದು ನಮಗೆ ತಿಳಿದಿಲ್ಲ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಉಪನ್ಯಾಸ ನೀಡುವ ಬದಲು ಪಪ್ಪುಗೆ ಕಲಿಸಬೇಕು. ರಾಹುಲ್​ ಗಾಂಧಿ ಅವರು ನಿರಂತರವಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುತ್ತಾರೆ ಎಂದು ರವನೀತ್​ ಸಿಂಗ್​ ಹೇಳಿದರು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗಾಗ್ಗೆ ಸಿಖ್ಖರ ವಿರುದ್ಧ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಕುಟುಂಬ ಸಿಖ್ಖರ ಮೇಲಿನ ದಾಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಸಿಖ್ಖರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದವು. ನಾಯಕನಾಗಿ ಅಥವಾ ಸಚಿವನಾಗಿ ನಾನು ರಾಹುಲ್ ಗಾಂಧಿ ಬಗ್ಗೆ ಈ ಮಾತನ್ನು ಹೇಳಿಲ್ಲ. ಬದಲಿಗೆ ನಾನು ಸಿಖ್ ಆಗಿರುವುದರಿಂದ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದರೆ ನನಗೇನು ತೊಂದರೆಯಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ನಾಯಕರು ಮಾಡಿರುವ ಅಸಭ್ಯ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರು ರಾಹುಲ್ ಗಾಂಧಿಯನ್ನು ಭಯೋತ್ಪಾದಕ ಎಂದು ಹೇಳಿದ್ದಾರೆ. ಅವರು ತಮ್ಮ ಮಾತುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ರಾಹುಲ್ ಗಾಂಧಿಯವರ ಭವಿಷ್ಯ ಅವರ ಅಜ್ಜಿಯಂತೆಯೇ ಆಗಲಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂತಹ ಮಾತುಗಳು ಇತರರನ್ನು ಇದೇ ಭಾಷೆಯನ್ನು ಬಳಸಲು ಪ್ರೇರೇಪಿಸುತ್ತಿವೆ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

ನನ್ನ ಪ್ರಕಾರ ರಾಹುಲ್​ಗಾಂಧಿ ಭಾರತೀಯನಲ್ಲ. ಅವರಿಗೆ ಭಾರತದ ಮೇಲೆ ಪ್ರೀತಿಯಿಲ್ಲ. ಅವರು ಭಾರತದ ಹೊರಗೆ ಹೆಚ್ಚು ಸಮಯ ಕಳೆದಿದ್ದಾರೆ. ಅವರ ಸ್ನೇಹಿತರು ಹಾಗೂ ಕುಟುಂಬ ಅಲ್ಲಿದೆ. ಇದರಿಂದಾಗಿ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ, ಹೊರಹೋಗಿ ಎಲ್ಲವನ್ನು ತಪ್ಪು ಹೇಳುತ್ತಾರೆ. ರಾಹುಲ್ ಗಾಂಧಿ ಸಿಖ್ಖರನ್ನು ಒಡೆಯಲು ಯತ್ನಿಸಿದ್ದಾರೆ. ಸಿಖ್ಖರು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ, ಇದು ಕಿಡಿ ಹಚ್ಚುವ ಪ್ರಯತ್ನವಾಗಿದೆ. ರಾಹುಲ್ ಗಾಂಧಿ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿದ್ದರು. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net