ನವದೆಹಲಿ: ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಳಿಕ ಮಹಿಳಾ ವೈದ್ಯರನ್ನು ರಾತ್ರಿ ಪಾಳಿಯಲ್ಲಿ ಇರಿಸದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ನಿರ್ದೇಶನ ನೀಡಿತ್ತು. ಈ ವಿಚಾರವಾಗಿ ಸುಪ್ರೀಂಕೋರ್ಟ್ ಮಂಗಳವಾರ (ಸೆಪ್ಟೆಂಬರ್ 17) ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ಮಹಿಳೆಯರಿಗೆ ಭದ್ರತೆ ಬೇಕೆ ಹೊರತು ರಿಯಾಯಿತಿ ಅಲ್ಲ ಎಂದು ಹೇಳಿದೆ.
ಇದನ್ನು ಓದಿ: ದೆಹಲಿಗೆ ಒಬ್ಬರೆ ಸಿಎಂ..ಅದು ಅರವಿಂದ್ ಕೇಜ್ರಿವಾಲ್; ನನ್ನನ್ನು ಅಭಿನಂದಿಸಬೇಡಿ ಎಂದಿದ್ದೇಕೆ ಅತಿಶಿ
ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಬಂಗಾಳ ಸರ್ಕಾರದ ವಕೀಲ ಕಪಿಲ್ ಸಿಬಲ್ ಅವರನ್ನು ಮಹಿಳಾ ವೈದ್ಯರನ್ನು ಏಕೆ ಮಿತಿಗೊಳಿಸಲು ಬಯಸುತ್ತೀರಿ. ಮಹಿಳೆಯರು ರಾತ್ರಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ಕೇಳಿದರು.
ಮಹಿಳಾ ವೈದ್ಯರನ್ನು ಏಕೆ ಮಿತಿಗೊಳಿಸಬೇಕು? ಅವರಿಗೆ ರಿಯಾಯಿತಿ ಬೇಕಾಗಿಲ್ಲ, ಮಹಿಳೆಯರು ಪ್ರತಿ ಪಾಳಿಯಲ್ಲೂ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಸೂಕ್ತ ಭದ್ರತಾ ಕ್ರಮಗಳನ್ನು ಒದಗಿಸುವುದು ಸಮಸ್ಯಗೆ ಪರಿಹಾರವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಕಪಿಲ್ ಸಿಬಲ್ ಅವರಿಗೆ ಹೇಳಿದರು. ಸುರಕ್ಷತೆಯನ್ನು ಒದಗಿಸುವುದು ನಿಮ್ಮ ಜವಾಬ್ದಾರಿ. ರಾತ್ರಿಯಲ್ಲಿ ಕೆಲಸ ಮಾಡುವುದನ್ನು ನೀವು ನಿರ್ಬಂಧಿಸಲು ಸಾಧ್ಯವಿಲ್ಲ. ಪೈಲಟ್‌ಗಳು, ಸೇನಾ ಸಿಬ್ಬಂದಿ ಮತ್ತು ಇತರರು ರಾತ್ರಿಯ ಸಮಯದಲ್ಲಿ ಕೆಲಸ ಮಾಡುತ್ತಾರೆ ಅಧಿಸೂಚನೆಯನ್ನು ತಿದ್ದುಪಡಿ ಮಾಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಈ ವೇಳೆ ಅನುಜ್ ಗಾರ್ಗ್ ಪ್ರಕರಣವನ್ನು ಉಲ್ಲೇಖಿಸಿದರು. ಅದರಲ್ಲಿ ಪಂಜಾಬ್ ಸರ್ಕಾರವು ಮದ್ಯದ ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವಿಧಿಸಿದ್ದ ನಿಷೇಧವನ್ನು ತಿರಸ್ಕರಿಸಿತು. ಭದ್ರತೆಯ ಹೆಸರಿನಲ್ಲಿ ಮಹಿಳಾ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅನುಜ್ ಗಾರ್ಗ್ ಪ್ರಕರಣದಲ್ಲಿ ನಿರ್ಧರಿಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಹೇಳಿದರು.
ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ ಸುಪ್ರೀಂಕೋರ್ಟ್ಗೆ ಮಂಗಳವಾರ ಮಂಡಿಸಿದೆ. ವಿಚಾರಣೆ ವೇಳೆ ನ್ಯಾಯಾಲಯ, ಸಿಬಿಐ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಬಹಿರಂಗವಾಗಿರುವ ಅಂಶಗಳು ಆತಂಕಕಾರಿಯಾಗಿವೆ ಎಂದು ಹೇಳಿದೆ. ಸಿಬಿಐ ನೀಡಿರುವ ವಿವರಗಳನ್ನು ಬಹಿರಂಗಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಬಹಿರಂಗಪಡಿಸುವಿಕೆಯು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.(ಏಜೆನ್ಸೀಸ್)
ಕನ್ನಡ್ ಅಲ್ಲ.. ಕನ್ನಡ; ಅಭಿನಯ ಚಕ್ರವರ್ತಿ ಸುದೀಪ್ ಪಾಠ ಮಾಡಿದ್ದು ಯಾರಿಗೆ?