Union Budget 2025: ಧನ-ಧಾನ್ಯ ಕೃಷಿ ಯೋಜನೆ ವಿಸ್ತರಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ..

dk (95)
Published on

Union Budget 2025: ಸಂಸತ್ತಿನಲ್ಲಿ ವಿರೋಧ ಪಕ್ಷದ ಗದ್ದಲದ ನಡುವೆ ಈ ಬಾರಿಯ 2025-26ರ ಕೇಂದ್ರ ಬಜೆಟ್​ ಮಂಡನೆ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​, ಮೊದಲು ಕೃಷಿ ವಲಯದ ಬಗ್ಗೆ ಅವಯವ್ಯ ಮಂಡಿಸಿದರು.

ಈ ಬಜೆಟ್​ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದೀಗ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು ಮಂಡನೆ ಇಲ್ಲಿದೆ...

ಧನ್​ಧಾನ್ಯ ಕೃಷಿ ಯೋಜನೆ ವಿಸ್ತರಣೆ

ದೇಶದ ಮೊದಲ ಇಂಜಿನ್ ಕೃಷಿ ವಲಯ ಎಂದು ಹೇಳುವ ಮೂಲಕ ಪ್ರಧಾನಿ ಧನ್​ಧಾನ್ಯ ಕೃಷಿ ಯೋಜನೆ ವಿಸ್ತರಣೆಗೆ ಒತ್ತು ನೀಡಲಾಗಿದೆ. ಮುಂದಿನ 5 ವರ್ಷಕ್ಕೆ ಸಬ್​ಕಾ ಸಾಥ್ ಸಬ್​ಕಾ ವಿಕಾಸ್ ಅಡಿಯಲ್ಲಿ​​ 1.7 ಕೋಟಿ ರೈತರಿಗೆ ಇದರಿಂದ ನೆರವಾಗಲಿದೆ ಎಂದರು. ಅಲ್ಲದೆ, ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್‌ ಅಪ್‌ ಗಳಿಗೆ 10ಕೋಟಿಯಿಂದ 20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೋ ಕಂಪನಿಗಳಿಗೆ 5 ಲಕ್ಷವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ಇಂಥ 10 ಲಕ್ಷ ಕಾರ್ಡ್ ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗಿದೆ ಎಂದರು.

ಬಿಹಾರದಲ್ಲಿ ಮಖಾನ ಬೋರ್ಡ್(ತಾವರೆ ಬೀಜ)​​ ಸ್ಥಾಪನೆ ಮಾಡಲಾಗುವುದು. ಮಖಾನ ಅಭಿವೃದ್ಧಿಗೆ ತರಬೇತಿ ನೀಡುವುದು. ಮಖಾನಗೆ ಕಮರ್ಷಿಯಲ್ ಲಭ್ಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net