

| ಡಾ.ಭುಜಂಗ ಶೆಟ್ಟಿ ನಾರಾಯಣ ನೇತ್ರಾಲಯದ ನಿರ್ದೇಶಕ
ಗೃಹ ಆರೋಗ್ಯಸೇವೆಯನ್ನು ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ತರುವ ಕುರಿತು ಯಾವುದೇ ಪ್ರಸ್ತಾಪವಿಲ್ಲ. ರೋಗ ಪರೀಕ್ಷೆಯ ಮೇಲಿನ ವೆಚ್ಚಗಳ ಮರುಪಾವತಿ ಹೆಚ್ಚಳ ಮತ್ತು 80ಡಿ ಪರಿಚ್ಛೇದದ ಅಡಿಯಲ್ಲಿ ತೆರಿಗೆ ವಿನಾಯಿತಿಯು ರೋಗ ತಡೆಯ ಪರೀಕ್ಷೆಗಳ ವೆಚ್ಚ ಕುರಿತೂ ಪ್ರಸ್ತಾಪವಿಲ್ಲ. ಆರೋಗ್ಯಸೇವಾ ವಲಯಕ್ಕೆ 69 ಸಾವಿರ ಕೋಟಿ ರೂ. ನೀಡಿರುವುದು ಮತ್ತು ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಿಸಿರುವುದು ಸ್ವಾಗತಾರ್ಹ. ಇದು ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚು ಆಸ್ಪತ್ರೆಗಳನ್ನು ಪ್ರಾರಂಭಿಸಲು ನೆರವಾಗಲಿದೆ. ಹಣಕಾಸು ಸಚಿವರು ಆಯುಷ್ಮಾನ್ ಭಾರತ್ ವಿಮಾ ಯೋಜನೆಯಡಿ ಪಟ್ಟಿಯಾಗಿರುವ ಆಸ್ಪತ್ರೆಗಳಿಲ್ಲದೇ ಇರುವ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ಹಣಕಾಸು ಪೂರೈಕೆಯ ಕುರಿತೂ ಒತ್ತು ನೀಡಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಜನೌಷಧಿ ಮಳಿಗೆಗಳು, ಜೀವ ಉಳಿಸುವ ಔಷಧ ಮಳಿಗೆಗಳನ್ನು ಹೆಚ್ಚಿಸುವುದು ಸರ್ಕಾರದ ಮತ್ತೊಂದು ಉತ್ತಮ ಉಪಕ್ರಮವಾಗಿದೆ. ಔಷಧಗಳಲ್ಲದೆ, ಈ ಮಳಿಗೆಗಳು ಮತ್ತಷ್ಟು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಕೂಡ ದಾಸ್ತಾನು ಮಾಡಬಹುದು. ಇದರಿಂದ ಆರೋಗ್ಯಸೇವೆ ಮತ್ತಷ್ಟು ಕೈಗೆಟುಕುವಂತಾಗುತ್ತದೆ. ಸಚಿವರು ವೈದ್ಯಕೀಯ ಸಾಧನಗಳ ಮೇಲಿನ ತೆರಿಗೆಯನ್ನು ಟೈರ್ 2 ಮತ್ತು ಟೈರ್ 3 ನಗರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ನೆರವಾಗಲು ಬಳಸಲಾಗುತ್ತದೆ ಎಂದಿದ್ದಾರೆ. ಲಸಿಕೆ ಕಾರ್ಯಕ್ರಮದ ವಿಸ್ತರಣೆಯಂತಹ ಮಿಷನ್ ಇಂಧ್ರ ಧನುಷ್ ಮತ್ತು 2025ರ ವೇಳೆಗೆ ಕ್ಷಯ ರೋಗವನ್ನು ನಿವಾರಿಸುವ ಸರ್ಕಾರದ ಬದ್ಧತೆ, ಜಾಗತಿಕ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗಿಂತಲೂ ಐದು ವರ್ಷಗಳು ಮುಂದಿವೆ. ಇವುಗಳನ್ನು ಪರಿಗಣಿಸಬಹುದಾಗಿದೆ.