ಸಮವಸ್ತ್ರದಿಂದ ಗೌರವ ಹೆಚ್ಚಳ

24 SARAG 1
Published on

ಸರಗೂರು: ಹುದ್ದೆ ಯಾವುದೇ ಇದ್ದರೂ ಸಮವಸ್ತ್ರದಿಂದ ಗೌರವ ಸಿಗಲಿದೆ ಎಂದು ಹೆಗ್ಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಸುಧೀರ್ ಹೇಳಿದರು. ತಾಲೂಕಿನ ಹೆಗ್ಗನೂರು ಗ್ರಾಮಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಶುಕ್ರವಾರ ಸಮವಸ್ತ್ರ ವಿತರಿಸಿದ ನಂತರ ಅವರು ಮಾತನಾಡಿದರು. ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಸಮವಸ್ತ್ರ ತೊಟ್ಟು ಕರ್ತವ್ಯ ಮಾಡಿದರೆ ಹೆಮ್ಮೆ ದೊರಕುತ್ತದೆ. ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರು ಸಿಬ್ಬಂದಿ ಗುರುತಿಸಲು ಸಹಾಯವಾಗುತ್ತದೆ ಎಂದರು
ಉಪಾಧ್ಯಕ್ಷ ರುಕ್ಮಿಣಿ ಬಸವರಾಜ್, ಪಿಡಿಒ ನಾಗೇಂದ್ರ, ಕಾರ್ಯದರ್ಶಿ ಮಹೇಶ್, ಸದಸ್ಯರಾದ ಕಾಟವಾಳು ಮುತ್ತುರಾಜ್, ಮಾರಯ್ಯ, ಚಿಕ್ಕ ಶಂಭೇಗೌಡ, ಶಿವಶಂಕರ್, ಮಂಜುಳಾ, ಚೆಲುವರಾಜು, ಪ್ರಮೀಳಾ ಮಹೇಶ, ಮಾಜಿ ಅಧ್ಯಕ್ಷರಾದ ಸವಿತಾ, ಶೋಭಾರಾಣಿ, ಮಾಜಿ ಉಪಾಧ್ಯಕ್ಷರಾದ ನಾಗಮ್ಮ ನಾಗೇಂದ್ರ, ಮಂಜುಳಾ ವಸಂತಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net