ಹೆಂಡತಿಗೆ ಬ್ರೈನ್​ ಟ್ಯೂಮರ್​; ಚಿಕಿತ್ಸೆ ಕೊಡಿಸಲಾಗದ ಗಂಡ ಮಾಡಿದ್ದೇನು ಗೊತ್ತಾ?

murder
Published on

ಮುಂಬೈ: ಮನುಷ್ಯನ ಜೀವನಕ್ಕೆ ಹಣ ಅತಿ ಮುಖ್ಯ. ಅತಿ ಕಷ್ಟದ ಸಮಯದಲ್ಲಿ ಹಣವಿಲ್ಲದಿದ್ದರೆ ಆತ ಎಂತಹ ಹೇಯ ಕೃತ್ಯಕ್ಕಾದರೂ ಕೈ ಹಾಕಿಬಿಡಬಹುದು. ಅದೇ ರೀತಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿರುವ 45 ವರ್ಷದ ವ್ಯಕ್ತಿಯೊಬ್ಬ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ. ಆತನ ಹೆಂಡತಿಗೆ ಬ್ರೈನ್​ ಟ್ಯೂಮರ್​ ಕಾಯಿಲೆ ಇದ್ದು, ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತಂತೆ. ತಿಂಗಳುಗಳಿಂದ ಆ ಖರ್ಚನ್ನು ಭರಿಸಿದ್ದ ಆತನಿಗೆ ಜೀವನವೇ ಸಾಕೆನಿಸಿಬಿಟ್ಟಿದೆ. ಶನಿವಾರ ರಾತ್ರಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಹೆಂಡತಿಯನ್ನು ಕೊಲೆ ಮಾಡಿಬಿಟ್ಟಿದ್ದಾನೆ. ಅದಾದ ನಂತರ ರಕ್ತದ ಕಲೆಯಾಗಿದ್ದ ತನ್ನ ಬಟ್ಟೆಯನ್ನು ಮನೆಯಿಂದ ಹೊರಗೆ ತಂದು ಎಸೆದಿದ್ದಾನೆ.

ಇದನ್ನು ಕಂಡ ಗ್ರಾಮಸ್ಥರು ಅನುಮಾನ ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಭಾನುವಾರದಂದು ಆತನನ್ನು ಬಂಧಿಸಲಾಗಿದೆ. ಕಾಯಿಲೆಯನ್ನು ನೋಡಿ ನೋಡಿ ಬೇಸತ್ತಿದ್ದರಿಂದ ಈ ಕೆಲಸ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net