ಆತ್ಮಹತ್ಯೆ ಮಾಡಿಕೊಂಡವರಲ್ಲಿ ರೈತರಿಗಿಂತ ಇವರೇ ಹೆಚ್ಚು; 2018ರಲ್ಲಿ ಮೊದಲ ಸ್ಥಾನದಲ್ಲಿದೆ ಕೇರಳ...ಕರ್ನಾಟಕ..?

SUCIDE
Published on

ನವದೆಹಲಿ: 2017-18ರ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಕೃಷಿಕರಿಗಿಂತ ನಿರುದ್ಯೋಗಿಗಳೇ ಹೆಚ್ಚು!

ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ. 2018ರಲ್ಲಿ 12,936 ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಒಟ್ಟು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.9.6ರಷ್ಟು. 18ರಿಂದ 60ವರ್ಷದ 1,34,516 ಮಂದಿ ಆತ್ಯಹತ್ಯೆಗೆ ಶರಣಾಗಿದ್ದಾರೆ.

ಗೃಹ ಸಚಿವಾಲಯ ಬಿಡುಗಡೆ ಮಾಡಿರುವ 'ಭಾರತದಲ್ಲಿ ಆತ್ಮಹತ್ಯೆ-2018' ಎಂಬ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ. ಇದರ ಪ್ರಕಾರ 2017ರಲ್ಲೂ ರೈತರಿಗಿಂತ ನಿರುದ್ಯೋಗಿಗಲೇ ಆತ್ಮಹತ್ಯೆ ಮಾಡಿಕೊಂಡವರು ಹೆಚ್ಚು.

2018ರಲ್ಲಿ 10.349 (ಶೇ.7.7) ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇದೇ ಅವಧಿಯಲ್ಲಿ 12,936 (ಶೇ.9.6)ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 10,687 ಪುರುಷರು, 2,249 ಮಹಿಳೆಯರು.

ಆತ್ಮಹತ್ಯೆ ಎಲ್ಲಕ್ಕಿಂತ ಹೆಚ್ಚು ಆತ್ಮಹತ್ಯೆ ನಡೆದಿರುವುದು ಕೇರಳದಲ್ಲಿ ಒಟ್ಟು 1585 (ಶೇ.12.3), ತಮಿಳುನಾಡಿನಲ್ಲಿ 1,579 (ಶೇ.9.7), ಮಹಾರಾಷ್ಟ್ರದಲ್ಲಿ 1,260 (ಶೇ.8.5), ಕರ್ನಾಟಕದಲ್ಲಿ 1,094 ಮತ್ತು ಉತ್ತರಪ್ರದೇಶದಲ್ಲಿ 902 (ಶೇ.7) ಎಂದು ಅಂಕಿಗಳು ತಿಳಿಸಿವೆ.

ಅಂಕಿ ಅಂಶಗಳ ಪ್ರಕಾರ 2017ಕ್ಕಿಂತ 2018ರಲ್ಲಿ 0.3 ಹೆಚ್ಚಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net