ರೈತರಿಗೆ 50,850 ಕೋಟಿ ರೂ. ವಿತರಣೆ

Farmer
Published on

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (ಪಿಎಂ-ಕಿಸಾನ್) ದೇಶದಾದ್ಯಂತ ರೈತರಿಗೆ 50,850 ಕೋಟಿ ರೂಪಾಯಿ ಸಹಾಯಧನ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ರೈತರಿಗೆ ಕೃಷಿ ವೆಚ್ಚ ತೂಗಿಸಲು ಅದು ನೆರವಾಗಿದೆ. ಕಳೆದ ವರ್ಷ ಫೆಬ್ರವರಿ 24ರಂದು ಆರಂಭಿಸಲಾದ ಪಿಎಂ-ಕಿಸಾನ್ ಯೋಜನೆಯ ಮೊದಲ ವಾರ್ಷಿಕೋತ್ಸವದ ಸಂದರ್ಭ ಕೇಂದ್ರ ಕೃಷಿ ಸಚಿವಾಲಯ ಈ ಯೋಜನೆಯ ಪ್ರಗತಿಯನ್ನು ವಿವರಿಸಿದೆ.

ಯೋಜನೆಯನ್ವಯ ವರ್ಷಕ್ಕೆ 6,000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 2015-16ರ ಕೃಷಿ ಗಣತಿ ಅಂದಾಜಿನ ಆಧಾರದಲ್ಲಿ ಸುಮಾರು 14 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net