ನಿರ್ಮಾಣ ಹಂತದ ಕಟ್ಟಡ ಕುಸಿತ; ಸತತ 16 ಗಂಟೆಗಳ ಕಾರ್ಯಾಚರಣೆ: ಅವಶೇಷಗಳಡಿಯಲ್ಲಿ ಸಿಲುಕಿದ್ದ 28 ಕಾರ್ಮಿಕರ ರಕ್ಷಣೆ

dk-83-6783c79a0c7a2
Published on: 

ನವದೆಹಲಿ: ಇಲ್ಲಿನ ಕನ್ನೌಜ್ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದ ಪರಿಣಾಮ ಅವಗಢದ ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದ ಎಲ್ಲಾ 28 ಕಾರ್ಮಿಕರನ್ನು ಸತತ 16 ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣಾ ತಂಡಗಳು ಭಾನುವಾರ ರಕ್ಷಣೆ ಮಾಡಿವೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ರಕ್ಷಿಸಲಾದ ಎಲ್ಲಾ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಶುಭ್ರಂತ್ ಕುಮಾರ್ ಶುಕ್ಲಾ ಅವರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ದುರಂತ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜನವರಿ 11ರ ಶನಿವಾರ ಮಧ್ಯಾಹ್ನ ನಿಲ್ದಾಣದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಶಟರ್ ಕುಸಿದು ಕಾರ್ಮಿಕರು ಸಿಲುಕಿದ್ದರು. ಘಟನೆಯ ನಂತರ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ರೈಲ್ವೆ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಗಾಯಳುಗಳಿಗೆ 2.5 ಲಕ್ಷ ರೂ. ಪರಿಹಾರ

ಕನೌಜ್ ರೈಲು ನಿಲ್ದಾಣದ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ಅರ್ಬನ್ ಟ್ರಾನ್ಸ್‌ಫರ್ಮೇಷನ್ (ಅಮೃತ್) ಭಾಗವಾಗಿ ನಿರ್ಮಾಣವನ್ನು ಕೈಗೊಳ್ಳಲಾಯಿತು. ಗಾಯಗೊಂಡ ಕಾರ್ಮಿಕರಿಗೆ  50,000 ರೂ ಮತ್ತು ಗಂಭೀರ ಗಾಯಗೊಂಡವರಿಗೆ 2.5 ಲಕ್ಷ ರೂ. ಎನ್‌ಇಆರ್ ಅಧಿಕಾರಿಗಳು ಪರಿಹಾರ ಘೋಷಿಸಿದ್ದಾರೆ.(ಏಜೆನ್ಸೀಸ್​)