

ರಾಣೆಬೆನ್ನೂರ: ನಗರದ ಕುರುಬಗೇರಿ ಕಾಕಿ ಓಣಿಯ ಸಿಟಿಎಸ್ ನಂ.3047ರಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿಮಿರ್ಸುತ್ತಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಲಿದೆ. ಆದ್ದರಿಂದ ನಗರಸಭೆಯವರು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅನಧಿಕೃತ ಕಟ್ಟಡ ತೆರವುಗೊಳಿಸಬೇಕು ಎಂದು ಕಾಕಿ ಜನಸೇವಾ ಟ್ರಸ್ಟ್ ಅಧ್ಯ ಶ್ರೀನಿವಾಸ ಕಾಕಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಟ್ಟಡ ನಿರ್ಮಾಣ ಹಂತದಲ್ಲಿಯೇ ನಗರಸಭೆ ಅಧಿಕಾರಿಗಳು ಅನಧಿಕೃತ ಕಟ್ಟಡದ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಿ ಆಸ್ತಿ ಅಳತೆ ಮಾಡಿಸಿಕೊಂಡು ಕಟ್ಟಡ ನಿಮಿರ್ಸುವಂತೆ ಸೂಚಿಸಿದ್ದರು.
ಆದರೆ, ಕಟ್ಟಡದ ಮಾಲೀಕರು ಇದನ್ನೆಲ್ಲ ಧಿಕ್ಕರಿಸಿ ಸಾರ್ವಜನಿಕರ ರಸ್ತೆ ಅತಿಕ್ರಮಣ ಮಾಡಿ ರಸ್ತೆಯಲ್ಲಿ ಕಟ್ಟಡ ನಿಮಿರ್ಸಿದ್ದಾರೆ. ಇಲ್ಲಿನ ರಸ್ತೆಯು ಕೇವಲ 10 ಅಡಿಯಷ್ಟು ಅಗಲವಾಗಿದೆ. ಇದೀಗ ಅತಿಕ್ರಮಣ ಮಾಡಿ ನಿಮಿರ್ಸಿರುವ ಕಟ್ಟಡದಿಂದಾಗಿ ದ್ವಿಚಕ್ರ ವಾಹನಗಳು ಕೂಡ ಸಂಚರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅತಿಕ್ರಮಿತ ಕಟ್ಟಡ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಿವಾನಂದ ಬಗಾದಿ, ಶಿವಶಂಕರ ಕುಲಕಣಿರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.