200 ರೂ. Weekly Installment ಕಟ್ಟಲಾಗದೆ ಪ್ರಾಣಬಿಟ್ಟ ದಂಪತಿ

Couple Suicide
Published on

ಹೈದರಾಬಾದ್: 200 ರೂಪಾಯಿ ವಾರದ ಕಂತು (Weekly Installment) ಕಟ್ಟಲಾಗದೆ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಭೂಪಾಲಪಲ್ಲಿಜಿಲ್ಲೆಯ ಕಮಲಾಪುರ ಗ್ರಾಮದಲ್ಲಿ ನಡೆದಿದೆ. 

ಮೃತರನ್ನು ಬಾನೋತ್​ ದೇವೇಂದ್ರ (37), ಪತ್ನಿ ಚಂದನಾ (32) ಎಂದು ಗುರುತಿಸಲಾಗಿದ್ದು, ಇವರು ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ರಿಷಿ (14) ಹಾಗೂ ಜಸ್ವಂತ್ (12) ವರ್ಷದ ಮಕ್ಕಳಿದ್ದು, ಇವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

Suicide

ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು, ಚಂದನಾ ಗ್ರಾಮದ ಕೆಲ ಮಹಿಳೆಯರೊಂದಿಗೆ ಸೇರಿ ಖಾಸಗಿ ಲೇವಾದೇವಿಗಾರರಿಂದ ವಾರಕ್ಕೆ 200 ಕಂತು (Weekly Installment) ಕಟ್ಟುವುದಾಗಿ ಹೇಳಿ ಎರಡೂವರೆ ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ವರ್ಷಕ್ಕೂ ಹೆಚ್ಚಿನ ಕಾಲ ಸರಿಯಾದ ಸಮಯಕ್ಕೆ ಸಾಲ ಕಟ್ಟಿದ್ದ ಚಂದನಾ ಕಳೆದ ಕೆಲ ವಾರಗಳಿಂದ ಪತಿ ಹಾಗೂ ಮಕ್ಕಳ ಅನಾರೋಗ್ಯದ ಕಾರಣ ಕಂತುಗಳನ್ನು ಸರಿಯಾಗಿ ಕಟ್ಟಲು ಸಾಧ್ಯವಾಗಿರಲಿಲ್ಲ. 

ಸರಿಯಾದ ಸಮಯಕ್ಕೆ ಕಂತು(Weekly Installment) ಪಾವತಿ ಮಾಡದ ಹಿನ್ನೆಲೆ ಸಾಲಗಾರರ ಕಾಟ ಹೆಚ್ಚಾಗಿದ್ದು, ದಂಪತಿಗಳು ಇದರಿಂದ ತೀವ್ರವಾಗಿ ಮನನೊಂದಿದ್ದರು. ಡಿಸೆಂಬರ್​ 06ರಂದು ಚಂದನಾ ಆತ್ಮಹತ್ಯೆಗೆ ಯತ್ನಿಸಿದ್ದು, ನೆರೆಹೊರೆಯವರ ಸಮಯಪ್ರಜ್ಞೆಯಿಂದ ಚಂದನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯ ಪರಿಸ್ಥಿತಿ ಕಂಡು ಚಿಂತೆಗೀಡಾಗಿದ್ದ ಪತಿ ಡಿಸೆಂಬರ್​ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಚಂದನಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net