ಉಂಬ್ಳೆಬೈಲ್‌ನಲ್ಲಿ ಮತ್ತೆ ಕಾಡಾನೆ ದಾಳಿ, ರೈತರಲ್ಲಿ ಆತಂಕ

6304efaf-77e8-4c58-bb75-ad320fd2a027
Published on

ಶಿವಮೊಗ್ಗ: ತಾಲೂಕಿನ ಉಂಬ್ಳೆಬೈಲ್ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ಬಿಡುವು ನೀಡಿದ್ದ ಕಾಡಾನೆಗಳು ಮತ್ತೆ ದಾಳಿ ಮಾಡಿದ್ದು ಶನಿವಾರ ರಾತ್ರಿ ಗ್ರಾಮದ ಹಲವೆಡೆ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.

ಉಂಬ್ಳೆಬೈಲ್‌ನ ವಿಶ್ವನಾಥಗೌಡ ಅವರ ಜಮೀನಿಗೆ ನುಗ್ಗಿ ತೆಂಗು, ಅಡಕೆ ಮರ, ಹೇಮಂತ್ ಅವರ ಅಡಕೆ ಮರಗಳು, ಕೃಷ್ಣ ಅವರ ತೆಂಗು, ಶಾಂತಮ್ಮ ಅವರ ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಇದು ಸಹಜವಾಗಿಯೇ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಎರಡು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಉಂಬ್ಳೆಬೈಲ್, ಲಕ್ಕಿನಕೊಪ್ಪ, ಗೋಣಿಬೀಡು ಸುತ್ತಮುತ್ತ ಭಾಗದಲ್ಲಿ ಪದೇ ಪದೇ ದಾಳಿ ಮಾಡುತ್ತಿವೆ. ರೈತರು ಸಾಕಷ್ಟು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net