

ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಹುತಾತ್ಮ ಯೋಧರ ಸಮಾಧಿ ಮೇಲೆ ಡಾನ್ಸ್ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಯೋಧರ ಸಮಾಧಿ ಮೇಲೆ ಡಾನ್ಸ್ ಮಾಡಿದ ಆರೋಪದ ಮೇಲೆ ಇಬ್ಬರು ಉಕ್ರೇನ್ ಸೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಈ ಸೋದರಿಯರು ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಘಟನೆ ನಡೆದಿದೆ.
ಸಮಾಧಿ ಮೇಲೆ ಡಾನ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನ ಸಾಮಾಜಿಕ ಜಾಲತಾಣಗಳಲ್ಲಿ ಸೋದರಿಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಇದೀಗ ಡಾನ್ಸಿಂಗ್ ಸೋದರಿಯರನ್ನು ಬಂಧಿಸಿದ್ದಾರೆ.
ಇವರ ವೀಡಿಯೋ vl_lindermann ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಆಗಸ್ಟ್ 24 ರಂದು ಪೋಸ್ಟ್ ಆಗಿತ್ತು. ಆದರೆ ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ವೀಡಿಯೋವನ್ನು ಖಾತೆಯಿಂದ ತೆಗೆದು ಹಾಕಿ ಕ್ಷಮೆ ಕೇಳಿದ್ದರು. ತಾವು ತಮ್ಮ ಮೃತ ತಂದೆಯ ಸಮಾಧಿಗೆ ಭೇಟಿ ನೀಡಿದ ವೇಳೆ ಈ ರೀತಿ ಮಾಡಿದ್ದಾಗಿ ಸೋದರಿಯರು ಹೇಳಿಕೊಂಡಿದ್ದರು.
ವರದಿಯ ಪ್ರಕಾರ ಈ ಇಬ್ಬರು ಸೋದರಿಯರಾಗಿದ್ದು, ಇವರು ಯುದ್ಧದಲ್ಲಿ ಮಡಿದ ತಮ್ಮ ತಂದೆಯ ಸಮಾಧಿಗೆ ಭೇಟಿ ನೀಡಲು ಬಂದಿದ್ದರು ಎಂದು ತಿಳಿದು ಬಂದಿದೆ. ಇವರ ತಂದೆ 2022ರಲ್ಲಿ ರಷ್ಯಾ ಉಕ್ರೇನ್ ಯುದ್ಧದ ವೇಳೆ ಈಜಿಯಂ ಎಂಬಲ್ಲಿ ಹುತಾತ್ಮರಾಗಿದ್ದರು ಎಂದು ಕೀವ್ (Kyiv) ಪೊಲೀಸರು ಟೆಲಿಗ್ರಾಂನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಯುವತಿಯರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.