ಗಾರೆ ಕೆಲಸ ಮಾಡುತ್ತಿದ್ದ ಮೇಸ್ತ್ರಿಗೆ ಲಾಟರಿಯಲ್ಲಿ 360 ಕೋಟಿ ರೂ. ಜಾಕ್ ಪಾಟ್!

UK Mans Lottery Ticket To Provide Him Rs 1 Crore Monthly For 30 Years
Published on

ಅಮೆರಿಕಾ: ಅದೃಷ್ಟ ಯಾವಾಗ ಬರುತ್ತೋ ಗೊತ್ತಿಲ್ಲ. ಅಲ್ಲಿಯವರೆಗೆ ಬಡತನದಲ್ಲಿದ್ದವರು ಲಕ್ಷಾಧಿಪತಿಗಳಾಗುತ್ತಾರೆ. ಲಾಟರಿ ಟಿಕೆಟ್ ಖರೀದಿಸಿ ಕೋಟ್ಯಂತರ ರೂಪಾಯಿ ಗೆದ್ದು ಜಾಕ್ ಪಾಟ್ ಹೊಡೆದಿರುವ ಸುದ್ದಿ ಕೇಳಿದ್ದೇವೆ. ಇಲ್ಲೊಬ್ಬ ಮೇಸ್ತ್ರಿ ಲಾಟರಿ ಟಿಕೆಟ್ ಖರೀದಿಸಿ 360 ಕೋಟಿ ರೂ. ಗೆದ್ದಿದ್ದಾರೆ.

ಗಾರೆ ಕೆಲಸ ಮಾಡುವ ಮೇಸ್ತ್ರಿಗೆ ಆತ ಮಾಡುವ ಕೆಲಸ ಶ್ರೇಷ್ಠವಾಗಿದೆ. ಆದರೆ ಕೂಲಿ ದಿನಕ್ಕೆ ಸಾವಿರ ರೂ. ಸಂಬಳ ಪಡೆಯುವ ಈತನಿಗೆ ಲಾಟರಿಯಲ್ಲಿ ನೂರಾರು ಕೋಟಿ ರೂ. ಗೆದ್ದಿದ್ದು ಆತನ ಕುಟುಂಬದಲ್ಲಿ ಸಂತಸದಲ್ಲಿ ಮುಳುಗಿದೆ.

ಯುಕೆಯ ಟ್ರೋಬ್ರಿಡ್ಜ್‌ನ ನಿವಾಸಿಯಾಗಿರುವ 52 ವರ್ಷದ ಜಾನ್ ಸ್ಟ್ರೋಂಬ್ರಿಡ್ಜ್ ಕಳೆದ ವರ್ಷ ನ್ಯಾಷನಲ್ ಲಾಟರಿ ಸೆಟ್ ಫಾರ್ ಲೈಫ್‌ನಿಂದ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಆದರೆ ಕಳೆ ಖರೀದಿ ಮಾಡಿದ ಲಾಟರಿ ಟಿಕೆಟ್​​ ಈ ವರ್ಷ ಮೇ 18 ರಂದು ತನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ಅವರು ಊಹಿಸಲಿಲ್ಲ.

ಜಾನ್ ಸ್ಟ್ರೋಂಬ್ರಿಡ್ಜ್  ಅವರಿಗೆ ಕಾಟರಿ ಟಿಕೆಟ್ ಖರೀಸಿ ಮಾಡಿರುವುದು ಮರೆತು ಹೋಗಿತ್ತು. ಸ್ವಲ್ಪ ದಿನಗಳ ನಂತರ ಲಾಟರಿ ಖರೀದಿಸಿದ್ದು ನೆನಪಾಯಿತು. ಕೂಡಲೇ ಟಿಕೆಟ್ ಖರೀದಿಸಿದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಜಾನ್ ಸ್ಟ್ರೋಂಬ್ರಿಡ್ಜ್ ಅವರಿಗೆ ಅದೃಷ್ಟ ಕುಲಾಯಿಸುತ್ತೀರುವ ವಿಷಯವೊಂದು ಗೊತ್ತಾಗಿದೆ.

ಲಾಟರಿಯಲ್ಲಿ ಹಣ ಬಂದಿರುವುದು ಗೊತ್ತಾಗಿದೆ. ತನಗೆ ಕೈತುಂಬಾ ಹಣ ಸಿಗುತ್ತದೆ ಎಂದುಕೊಂಡಿದ್ದ, ಕೋಟಿಗಟ್ಟಲೆ ಬರಬಹುದು ಎಂದುಕೊಂಡಿರಲಿಲ್ಲ. ಅದೇ ಹೊತ್ತಿಗೆ ತಿಂಗಳಿಗೆ ಒಂದು ಕೋಟಿ ರೂಪಾಯಿಯಂತೆ 30 ವರ್ಷಕ್ಕೆ ಹಣ ಸಿಗುತ್ತದೆ ಎಂದು ತಿಳಿಯಿತು. ಅಂದರೆ ಲಾಟರಿ ಟಿಕೆಟ್ ಒಟ್ಟು 360 ಕೋಟಿ ರೂ. ತಂದಿದೆ.

ಲಾಟರಿ ಟಿಕೆಟ್​​ಗೆ ಜಾಕ್ ಪಾಟ್ ಹೊಡೆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಂತಸ ವ್ಯಕ್ತಪಡಿಸಿದರು. ಬದುಕಿನಿಂದ ಕಷ್ಟಗಳು ದೂರವಾಗಿ ಸುಖ ಸಂತೋಷಗಳು ಉಕ್ಕಿ ಬರುತ್ತವೆ. ಪ್ರತಿ ತಿಂಗಳು 1 ಕೋಟಿ ರೂ. ಗಳಿಸುವುದು ಅಸಾಮಾನ್ಯ ಎಂದು ಜಾನ್ ಬಹಿರಂಗಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net