

ಲಂಡನ್: ರಸ್ತೆ ಗುಂಡಿ ಸಮಸ್ಯೆ ಇವತ್ತು ನಿನ್ನೆಯದಲ್ಲ. ಈ ಸಮಸ್ಯೆಗೆ ಪರಿಹಾರ ಕೊಡುವಂತೆ ಸಾರ್ವಜನಿಕರು ಕೇಳುತ್ತಿರುತ್ತಾರೆ. ಆದರೆ ಈ ಸಮಸ್ಯೆಯ ಆಳವನ್ನು ಅರಿತುಕೊಂಡ ವ್ಯಕ್ತಿಯೊಬ್ಬ ತಿನ್ನುವ ಪದಾರ್ಥದಿಂದ ರಸ್ತೆ ಗುಂಡಿಯನ್ನು ಮುಚ್ಚುವ ಮೂಲಕವಾಗಿ ಸೋಶಿಯಲ್ ಮೀಡಿಯಾಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
ಬ್ರಿಟನ್ ನಿವಾಸಿಯಾಗಿರುವ ಮಾರ್ಕ್ ಮೊರೆಲ್ ಅವರು ರಸ್ತೆಗಳಲ್ಲಿರುವ ಗುಂಡಿಗಳಿಂದ ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಇವರು ಹತ್ತು ವರ್ಷಗಳಿಂದ ಸರ್ಕಾರಕ್ಕೆ ಮನವರಿಕೆ ಮಾಡಿಸುವ ಯತ್ನದಲ್ಲೇ ಇದ್ದಾರಂತೆ.
ಗುಂಡಿಗಳಿಗೆ ರಬ್ಬರ್ ತುಂಬುವುದು, ಬೇರೆ ಬೇರೆ ವಸ್ತು ತುಂಬಿಸಿ ಗುಂಡಿ ಮುಚ್ಚುವ ಕೆಲಸವನ್ನು ಅವರು ಈವರೆಗೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ವಿಶೇಷ ರೀತಿಯಲ್ಲಿ ಗುಂಡಿ ಮುಚ್ಚುವುದಕ್ಕೆ ಆರಂಭಿಸಿದ್ದಾರೆ. ಈ ಬಾರಿ ಮಾರ್ಕ್ ಮಾಡಿರುವ ಉಪಾಯ ಕೇಳಿದ್ರೆ ಖಂಡಿತಾ ಆಶ್ಚರ್ಯ ಆಗುವುದು ಹೌದು.
ಇದನ್ನೂ ಓದಿ: ಬಿಹಾರದ ಶಿಕ್ಷಕಿ ಗುಜರಾತ್ನಲ್ಲಿದ್ದುಕೊಂಡೇ 5 ತಿಂಗಳು ಸಂಬಳ ಪಡೆದು ಸಿಕ್ಕಿಬಿದ್ದರು!
ರಸ್ತೆ ಗುಂಡಿಗಳಿಗೆ ತಿನ್ನುವ ನೂಡೆಲ್ಸ್ ಅನ್ನೇ ಹಾಕಿ ಮುಚ್ಚಲಾರಂಭಿಸಿದ್ದಾರೆ. ಅದಕ್ಕೆಂದೇ ನೂಡಲ್ಸ್ ಕಂಪನಿಯೊಂದರ ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಎಲ್ಲೆಲ್ಲಿ ಗುಂಡಿ ಕಾಣುತ್ತದೆಯೋ ಅಲ್ಲೆಲ್ಲಾ ಅವರು ನೂಡಲ್ಸ್ ತುಂಬಲಾರಂಭಿಸಿದ್ದಾರೆ. ನೂಡಲ್ಸ್ ಗುಂಡಿಯೊಳಗೆ ನೀಟಾಗಿ ಕುಳಿತುಕೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.