23,000 ರೂ. ಬಿಲ್​ ಕೊಟ್ಟಿಲ್ಲ! ಭಾರತೀಯ ಹೋಟೆಲ್​ ಮಾಲೀಕ ಕಂಗಾಲು; ಸಿಸಿಟಿವಿ ದೃಶ್ಯಕ್ಕಾಗಿ ನೆಟ್ಟಿಗರ ಆಗ್ರಹ | UK Families

ವಿಜಯವಾಣಿ (38)
Published on

UK Families: ಯುಕೆಯಲ್ಲಿರುವ ಭಾರತೀಯ ಹೋಟೆಲ್​ವೊಂದರಲ್ಲಿ ಹೊಟ್ಟೆ ತುಂಬ ತಿಂದಿದ್ದಲ್ಲದೇ, ರೂಮ್​ನಲ್ಲಿ ಉಳಿದು ಹೋದ ಕುಟುಂಬಗಳು, ಮಾಲೀಕರಿಗೆ 23,000 ರೂ. ಬಿಲ್ ಕೊಡದೆ ಹೋದ ಘಟನೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ವರದಿಯಾಗಿದೆ.

ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿರುವ ಸಾಯಿ ಸುರ್ಭಿ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ತಮಗೆ ಬಿಲ್ ಪಾವತಿಸದೆ ಹೋದ ಕುಟುಂಬಗಳ ಕುರಿತು ಸ್ವತಃ ಸಂಸ್ಥೆಯ ಮಾಲೀಕರಾದ ರಮಣ್ ಕೌರ್ ಮತ್ತು ನರಿಂದರ್ ಸಿಂಗ್ ಅಥ್ವಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ಪೋಸ್ಟ್​ನಲ್ಲಿ, ಆ ಕುಟುಂಬ ಪಾವತಿಸದ ಬಿಲ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಿಲ್​ನಲ್ಲಿ ತಿಳಿಸಿರುವಂತೆ ಒಟ್ಟು 23,500 ರೂ. ಕೊಡಬೇಕು ಎಂಬುದು ಮಾಲೀಕರ ಗೋಳಾಟ.

ಏನಿದು ಘಟನೆ?

ವರದಿ ಪ್ರಕಾರ, ನಾಲ್ಕು ವಯಸ್ಕರು ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಎರಡು ಕುಟುಂಬ, ಆಗಸ್ಟ್ 30ರಂದು ರೆಸ್ಟೋರೆಂಟ್‌ಗೆ ಭೇಟಿ ನೀಡಿದೆ. ಈ ವೇಳೆ ರೆಸ್ಟೋರೆಂಟ್​ನಲ್ಲಿ ತಂಗಿದ್ದ ಕುಟುಂಬವು, ಅಲ್ಲಿನ ಊಟವನ್ನು ಆನಂದಿಸಿ, ಆಹಾರ ಮತ್ತು ಹೋಟೆಲ್​ ಸಿಬ್ಬಂದಿ ನೀಡಿದ ಸರ್ವಿಸ್ ಅನ್ನು​ ಕೊಂಡಾಡಿದ್ದರು. ಆದರೆ, ಇನ್ನೇನು ಹೋಗಬೇಕು ಎನ್ನುವ ವೇಳೆಗೆ ಬಿಲ್​ ಪಾವತಿಸಲು ಪರದಾಡಿದ ಕುಟುಂಬಸ್ಥರು, ವಿವಿಧ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳನ್ನು ನೀಡಿದರು. ಆದ್ರೆ, ಅದರಿಂದ ಯಾವುದೇ ಪ್ರಯೋಜವಾಗಿಲ್ಲ.

ನಂತರದಲ್ಲಿ ತಮ್ಮ ಸ್ನೇಹಿತರಿಂದ ಹಣ ವರ್ಗಾಯಿಸುವಂತೆ ಕೇಳಿದರು. ಆದರೂ ಪಾವತಿ ಮಾಡಲು ಸಾಧ್ಯವಾಗಿಲ್ಲ. ಕಾರಣ, ಅವರಿಂದಲೂ ಹಣ ಬಂದಿಲ್ಲ. ಈ ವೇಳೆ ಮಾಲೀಕರ ಬಳಿ ಕ್ಷಮೆಯಾಚಿಸಿದ ಇಬ್ಬರು ಪುರುಷರು, ಈಗ ನಮಗೆ ಪಾವತಿಸಲು ಯಾವುದೇ ಮಾರ್ಗ ಉಳಿದಿಲ್ಲ. ಪ್ರಸ್ತುತ, ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ನಿಮ್ಮ ಹಣವನ್ನು ನಾಳೆ ಹಿಂತಿರುಗಿಸುತ್ತೇವೆ ಎಂಬ ಭರವಸೆ ನೀಡಿ, ತಮ್ಮ ಹೆಸರು, ಫೋನ್ ನಂಬರ್​ ಬರೆದಿಟ್ಟರು. ಪಾವತಿ ಆಗದಿದ್ದರೆ, ನಿಮ್ಮ ಹೋಟೆಲ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಪಡಿಸಿ ಎಂದು ಮಾಲೀಕರಿಗೆ ಹೇಳಿ ಹೋಗಿರುವುದಾಗಿ ವರದಿ ಉಲ್ಲೇಖಿಸಿದೆ.

“ಕ್ಷಮೆಯಾಚನೆ ಮಾಡಿ, ಹಣ ಕೊಡದೆ ಹೋದ ಕುಟುಂಬಸ್ಥರು, ಇಲ್ಲಿಯವರೆಗೂ ಬಿಲ್ ಪಾವತಿ ಮಾಡಿಲ್ಲ. ಇದು ಮಾಲೀಕರ ಕಳವಳಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಹಂಚಿಕೊಂಡ ಮಾಲೀಕರನ್ನು ಪ್ರಶ್ನಿಸಿರುವ ನೆಟ್ಟಿಗರು, ಹಣ ಪಾವತಿಸದಿದ್ದರೆ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಜಾಲತಾಣಗಳಲ್ಲಿ ಹರಿಬಿಡಿ ಎಂದಿದ್ದಾರೆ ಅಲ್ವೇ? ಈಗಲೇ ಫೂಟೇಜ್​ಗಳನ್ನು ಹಂಚಿಕೊಳ್ಳಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net