ಪತ್ನಿಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ

UK evil monster chops wifes body into 224 pieces dumps remains in river
Published on

ಬ್ರಿಟನ್‌: 28 ವರ್ಷದ ಯುವಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಆಕೆಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆಯೊಂದು ಬ್ರಿಟನ್‌ನಲ್ಲಿ ಬೆಳಕಿಗೆ ಬಂದಿದೆ.

28 ವರ್ಷದ ನಿಕೋಲಸ್ ಮ್ಯಾಟ್ಸನ್ ಕೊಲೆ ಆರೋಪಿ. ಹೋಲಿ ಬ್ರಮ್‌ಲೇ ಮೃತ ಮಹಿಳೆ. ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ನಂತರ ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ನದಿಗೆ ಎಸೆದಿದ್ದಾನೆ.

ನಡೆದಿದ್ದೇನು?: 26 ವರ್ಷದ ಹೋಲಿ ಬ್ರಮ್‌ಲೇ ಕಾಣೆಯಾದರು. ಬ್ರಾಮ್ಮಿ ನಾಪತ್ತೆಯಾದ ಎಂಟು ದಿನಗಳ ನಂತರ ,ಲಿಂಕನ್‌ಶೈರ್‌ನ ಬಾಸಿಂಗ್‌ಹ್ಯಾಮ್‌ನ ವಿಥಮ್ ನದಿಯಲ್ಲಿ ಹೋಲಿ ಬ್ರಮ್‌ಲೇ ಶವ ಪತ್ತೆಯಾಗಿತ್ತು. ವಾಕಿಂಗ್​ ಹೋಗಿದ್ದ ವ್ಯಕ್ತಿಯೊಬ್ಬರು ಇದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನ ಸಂಬಂಧ ನದಿ ಬಳಿಗೆ ಬಂದ ಪೊಲೀಸರು ಪ್ಲಾಸ್ಟಿಕ್ ಚೀಲವನ್ನು ನದಿಯಿಂದ ಮೇಲಕ್ಕೆತ್ತಿ ನೋಡಿದಾಗ ಅದರಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿದೆ, ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೊಲೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.

ಈ ಘಟನೆ ಸಂಬಂಧ ಕೊಲೆಯಾದ ಮಹಿಳೆಯ ಪತಿಯನ್ನು ವಿಚಾರಣೆ ನಡೆಸಿದ ವೇಳೆ ಮೊದಲು ತನಗೆ ಏನೂ ಗೊತ್ತಿಲ್ಲ ತನ್ನ ಪತ್ನಿ ನಾಪತ್ತೆಯಾಗಿ ವಾರಗಳು ಕಳೆದಿದೆ ಎಂದು ಹೇಳಿದ್ದ ಇದರಿಂದ ಅನುಮಾನಗೊಂಡ ಪೊಲೀಸರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿದ ವೇಳೆ ತಾನೇ ಕೊಲೆ ಮಾಡಿರುವುದಾಗಿ  ನಂತರ ಒಪ್ಪಿಕೊಂಡಿದ್ದಾನೆ.

ವರದಿಯ ಪ್ರಕಾರ, ನಿಕೋಲಸ್ ಮ್ಯಾಟ್ಸನ್ 2013, 2016 ಮತ್ತು 2017 ರ ವರ್ಷಗಳಲ್ಲಿ ಮೆಟ್ಸನ್ ವಿವಿಧ ಅಪರಾಧಗಳಿಗೆ ಶಿಕ್ಷೆಗೊಳಗಾದರು. ಆದರೆ, ಪತ್ನಿಯನ್ನು ಏಕೆ ಕೊಂದಿದ್ದಾನೆ ಎಂದು ಮೆಟ್ಸನ್ ಹೇಳಿಲ್ಲ. ಮ್ಯಾಟ್ಸನ್ ಮತ್ತು ಬ್ರಾಮ್ಲ 2021 ರಲ್ಲಿ ವಿವಾಹವಾದರು. ಮತ್ತು ಇಬ್ಬರೂ ವಿಚ್ಚೇದನದ ಅಂಚಿನಲ್ಲಿದ್ದರು ಎಂದು ತಿಳಿದು ಬಂದಿದೆ.

ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಬ್ರಾಮೈಯ ತಾಯಿ ಮತ್ತು ಸಹೋದರಿ, ನಿಕೋಲಸ್ ಮ್ಯಾಟ್ಸನನ್ನು 'ದುಷ್ಟ ರಾಕ್ಷಸ'  ಬಲವಂತವಾಗಿ ಮತ್ತು ವಂಚನೆಯ ಮೂಲಕ  ಬ್ರಮ್‌ಲೇಯನ್ನು  ಬಲೆಗೆ ಬೀಳಿಸಿಕೊಂಡಿದ್ದನು. 16 ತಿಂಗಳ ನಂತರ ಅವರ ದಾಂಪತ್ಯ ಮುರಿದು ಬೀಳಲು ಇದು ಕಾರಣವಾಗಿದೆ ಎಂದಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಪತಿ, ತನ್ನ ಪತ್ನಿ ನನಗೆ ನಿರಂತರ ಕಿರುಕುಳ ನೀಡುತ್ತಿದ್ದಳು ಇದರಿಂದ ಬೇಸತ್ತ ನಾನು ಆಕೆಯ ಹತ್ಯೆ ಮಾಡಲು ನಿರ್ಧರಿಸಿ ಮನೆಯ ಬೆಡ್ ರೂಮ್ ನಲ್ಲಿ ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ದೇಹವನ್ನು ಬಾತ್ ರೂಮ್ ಗೆ ತಂದು ಅಲ್ಲಿ ತುಂಡರಿಸಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಅಡುಗೆ ಕೊನೆಯಲ್ಲಿ ಒಂದು ವಾರಗಳ ಕಾಲ ಇರಿಸಿದ್ದೆ ಇದಾದ ಬಳಿಕ ಓರ್ವ ವ್ಯಕ್ತಿಗೆ ಸ್ವಲ್ಪ ದುಡ್ಡು ನೀಡಿ ಪ್ಲಾಸ್ಟಿಕ್ ಚೀಲವನ್ನು ನದಿಗೆ ಎಸೆಯಲು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net