ಗೋವಾ ಬೀಚ್​ನಲ್ಲಿ ಯುಕೆ ಮೂಲದ ಮಹಿಳೆ ಮೃತ್ಯು

goa beach
Published on

ಪಣಜಿ: ಗೋವಾ ವಿಹಾರಕ್ಕೆ ಬಂದಿದ್ದ ಇಂಗ್ಲೆಡ್​ ಮೂಲದ 46 ವರ್ಷದ ಮಹಿಳೆಯೊಬ್ಬರ ಶವ ಕೆನಕೋನಾ ಗ್ರಾಮದ ಬೀಚ್​ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಯ ದೇಹದ ಮೇಲೆ ಯಾವುದೇ ಗುರುತು, ಗಾಯಗಳಿಲ್ಲ. ಮೃತಳನ್ನು ಯುಕೆ ರಾಷ್ಟ್ರೀಯ ಎಮ್ಮಾ ಲೂಯಿಸ್ ಲೀನಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ಗೋವಾ ಜಿಲ್ಲೆಯ ಕೆನಕೋನಾ ಕಡಲತೀರದ ಬಳಿ ಪತ್ತೆಯಾದ ಮಹಿಳೆಯ ಮೃತ ದೇಹ ಕೊಳೆಯುವ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಕೋನಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ದಕ್ಷಿಣ ಗೋವಾದ ಮರ್ಗೋವಾದ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net