

ಉಜ್ಜಿನಿ: ಪ್ರತಿ ವಿದ್ಯಾರ್ಥಿಯೂ ಕ್ರೀಡಾ ಸ್ಫೂರ್ತಿಯಿಂದ ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.
ಗಾಣಗಟ್ಟೆ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಉಜ್ಜಿನಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ.
ಇದನ್ನೂ ಓದಿ:ದಸರಾ ಮುನ್ನವೇ ಕ್ರೀಡಾಕೂಟ ಆಯೋಜಿಸಿ
ಅದರಂತೆ ಕ್ರೀಡೆಯಲಿ ಹೆಚ್ಚು ಅಸಕ್ತಿ ಹಾಗೂ ಶಕ್ತಿ ಇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು. ಕ್ರೀಡಾಕೂಟದಲ್ಲಿ ಬೆನಕಹಳ್ಳಿ, ಉಜ್ಜಿನಿ, ನಿಂಬಳಗೆರೆ, ಮಂಗಾಪುರ, ಬೈರದೇವರಗುಡ್ಡ, ಗಾಣಗಟ್ಟೆ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.