ಪ್ರೇಕ್ಷಕರ 'ಫೋಕಸ್'​ ಗೆದ್ದ ಉಪ್ಪಿ 'UI' ಈಗ ಒಟಿಟಿಗೆ ಲಗ್ಗೆ! ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಮಾಹಿತಿ | UI OTT

ವಿಜಯವಾಣಿ (28)
Published on

UI OTT: ಇದೇ ಡಿ.20ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್​, ನಟ ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಯುಐ’ ಸಿನಿಮಾ ಸದ್ಯ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆಯ ಜತೆಗೆ ಚಿತ್ರರಸಿಕರಿಂದ ಉತ್ತಮ ಪ್ರತಿಕ್ರಿಯೆ, ವಿಮರ್ಶೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಹಲವಾರು ಥಿಯೇಟರ್​ಗಳಲ್ಲಿ ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಉಪ್ಪಿ ಚಿತ್ರ ಇದೀಗ ಒಟಿಟಿಗೆ ಲಗ್ಗೆಯಿಡಲು ಎದುರುನೋಡುತ್ತಿದೆ.

ಈ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್

'ಉಪ್ಪಿ 2' ನಿರ್ದೇಶನದ ಬಳಿಕ ಈಗ 'ಯುಐ' ಮೂಲಕ 10 ವರ್ಷಗಳ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಉಪೇಂದ್ರ, ಸಿನಿಮಾದಲ್ಲಿ ಸತ್ಯ ಹಾಗೂ ಭಗವಾನ್ ಕಲ್ಕಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಥ್ರಿಲ್ ನೀಡಿದೆ. ಒಂದೇ ತಾಯಿಯ ಮಕ್ಕಳಾಗಿ ಇಬ್ಬರು ಒಂದೊಂದು ರೂಪವನ್ನು ತಾಳಿ, ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಇದ್ದಂತೆ ಹೇಳುವ ಪ್ರಯತ್ನ ಬೆಳ್ಳಿ ಪರದೆಯ ಮೇಲೆ ಮೂಡಿಬಂದಿರುವುದು ನೋಡುಗರ ಗಮನಸೆಳೆದಿದೆ. ಸದ್ಯ ಭರ್ಜರಿ ಯಶಸ್ಸು ಕಂಡಿರುವ ಉಪ್ಪಿ ಸಿನಿಮಾ ಈಗ ಒಟಿಟಿ ರಿಲೀಸ್​ನತ್ತ ಮುಖ ಮಾಡಿದೆ. ಈ ಸುದ್ದಿ ಒಟಿಟಿ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ.

ದಿನಾಂಕ ನಿಗದಿಗೆ ಬಾಕಿ

ವರದಿಗಳ ಪ್ರಕಾರ, ಉಪೇಂದ್ರ ನಟಿಸಿ, ನಿರ್ದೇಶನದ ಯುಐ ಒಟಿಟಿ ಪ್ಲಾಟ್​ಫಾರ್ಮ್​ ಆದ ಸನ್​ನೆಕ್ಸ್ಟ್​ನಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಯಾವ ದಿನಾಂಕದಂದು ತೆರೆ ಕಾಣಲಿದೆ ಎಂಬ ಮಾಹಿತಿ ಇನ್ನೂ ದೃಢವಾಗಿಲ್ಲ ಎನ್ನಲಾಗಿದೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಚಿತ್ರವು 2025ರ ಜನವರಿ 30ರಂದು ಲೈವ್​ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಾಗಿದೆ. ಯುಐ ಒಟಿಟಿ ಪ್ರವೇಶ ಕುರಿತು ಚಿತ್ರತಂಡದಿಂದ ಹೊರಬೀಳಲಿರುವ ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net