'ಯುಐ' ಇದು ಬೇರೇನೇ ಜಗತ್ತು! ಅಸಲಿಗೆ ಉಪ್ಪಿ ಹೇಳ್ತಿರೋದೇನು?

ವಿಜಯವಾಣಿ - 2024-01-08T120835.579
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಡಿಫರೆಂಟ್​ ನಿರ್ದೇಶಕ, ರಿಯಲ್ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಯುಐ ಸಿನಿಮಾದ ಫಸ್ಟ್​ ಲುಕ್ ಟೀಸರ್​ ಇಂದು ಅಧಿಕೃತವಾಗಿ ಅನಾವರಣಗೊಂಡಿದ್ದು, ಲಹರಿ ಫಿಲಂಸ್​​ ಯುಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಗೊಂಡಿದೆ. ಚಿತ್ರದ ಫಸ್ಟ್​ ಲುಕ್​ ನೋಡಿದ ಉಪ್ಪಿ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಟನ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಯುಐ ಟೀಸರ್​ ನೋಡಿದ ಬಳಿಕ ತಲೆಗೆ ಬರುವ ಸಂಗತಿಗಳು ಹೀಗಿವೆ ನೋಡಿ.

ಕೆಲವು ವರ್ಷಗಳ ಬಳಿಕ ಯುಐ ಮೂಲಕ ಇದೀಗ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿರುವ ನಟ ಉಪೇಂದ್ರ, ಚಿತ್ರ ಸೆಟ್ಟೇರಿದ ಮೊದಲ ದಿನದಿಂದಲೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ, ಕುತೂಹಲ ಮೂಡಿಸುವುದರ ಜತೆಗೆ ಎಂದಿನಂತೆ ತಾವೊಬ್ಬರು ವಿಭಿನ್ನ ನಿರ್ದೇಶಕ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದ್ದಾರೆ.

ಇಂದು ಯುಐ ಲೋಕಕ್ಕೆ ಜಿಗಿದ ಪ್ರೇಕ್ಷಕರು ಚಿತ್ರದ ಮೇಕಿಂಗ್ ಹಾಗೂ ಉಪೇಂದ್ರ ನಿರ್ದೇಶನಕ್ಕೆ ಮಾರು ಹೋಗಿದ್ದಾರೆ. ಟೀಸರ್​ನ ಪ್ರಾರಂಭದಲ್ಲೇ ಇದು ಎಐ ಲೋಕವಲ್ಲ ಬದಲಿಗೆ ಯಐ ಲೋಕ ಎಂದು ಪರಿಚಯಿಸುವ ನಿರ್ದೇಶಕರು, ಬಿಜಿಎಂ ಮೂಲಕ ಸೆಳೆದು, ಡಾರ್ಕ್​ ಥೀಮ್​ನಡಿ ಯುಐ ಯೂನಿವರ್ಸ್​ಗೆ ಎಂಟ್ರಿ ಕೊಟ್ಟಿರುವುದು ಸಿನಿಮಾದ ಮೇಲೆ ಇದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿದೆ ನೋಡಿ ಯುಐ ಚಿತ್ರದ ಫಸ್ಟ್​ ಲುಕ್ ಟೀಸರ್​ ವಿಡಿಯೋ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net