More

    “ಸೇ ನೋ ಡ್ರಗ್ಸ್” ವಾಕಥಾನ್ ; ನಟ ಗೋಲ್ಡನ್ ಸ್ಟಾರ್ ಗಣೇಶ್ ಡ್ರಗ್ಸ್ ವಿರುದ್ಧ ಜಾಗೃತಿ

    ಬೆಂಗಳೂರು: ಪಶ್ಚಿಮ ವಿಭಾಗದ ಪೊಲೀಸರು ಇಂದು “ಸೇ ನೋ  ಡ್ರಗ್ಸ್” ವಾಕಥಾನ್ ಆಯೋಜಿಸಿದ್ದರು. ನಟ ಗಣೇಶ್ ವಾಕಥಾನ್‌ಗೆ ಚಾಲನೆ ನೀಡಿದ್ದಾರೆ. 

    ನಾಗರಭಾವಿ ಸರ್ಕಲ್ ನಿಂದ ಜ್ಞಾನಭಾರತಿ ಪೊಲೀಸ್ ಠಾಣೆವರೆಗೂ ವಾಕಥಾನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ವಾಕಾಥಾನ್​ನಲ್ಲಿ ನಟ ಗಣೇಶ್ ಕೂಡ ಭಾಗಿಯಾಗಿದ್ದರು. ನೋ ಡ್ರಗ್ಸ್ ಎಂದು ಹೇಳುವ ಮೂಲಕ ನಟ ಗಣೇಶ್ ಪೊಲೀಸರಿಗೆ ಸಾಥ್ ಕೊಟ್ಟಿದ್ದಾರೆ.

    ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದೆಲ್ಲೆಡೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಇಂದು ಪಶ್ಚಿಮ ವಿಭಾಗದಲ್ಲಿ ನಡೆಸಲು ನಿರ್ಧರಿಸಿದ್ದೇವೆ.ಹಲವು ವಿದ್ಯಾರ್ಥಿಗಳು ಭಾಗವಹಿಸಲು ಕೋರಲಾಗಿದೆ. ಈ ವಾಕಥಾನ್‌ನಲ್ಲಿ ನಾವು ‘ಸೇ ನೋ ಡ್ರಗ್ಸ್’ ಸಂದೇಶವನ್ನು ಹರಡಬೇಕಾಗಿದೆ.

    ನೂರಾರು ಎನ್​ಎಸ್​ಎಸ್ ಹಾಗೂ ಎನ್​ಸಿಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಎಸಿಪಿಗಳಾದ ಚಂದನ್, ಭರತ್ ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದರು. ಮಾದಕ ವಸ್ತುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ, ಶೈಕ್ಷಣಿಕ ವೈಫಲ್ಯಕ್ಕೆ ಕಾರಣವಾಗುವ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಕಾರಣದಿಂದ ಯುವಕರು ಮಾದಕ ವಸ್ತುಗಳಿಂದ ದೂರವಿರುವಂತೆ ವಾಕಥಾನ್ ಜಾಗೃತಿ ಮೂಡಿಸಲಿದೆ ಎಂದರು. ಜಾಗೃತಿಯು ಇಂದಿನ ಜಗತ್ತಿನಲ್ಲಿ ಸಾರ್ವಜನಿಕರಲ್ಲಿ ಹರಡಬೇಕಾದ ನಿಜವಾದ ವಿಷಯವಾಗಿದೆ. ಇಂದು ಅನೇಕ ವಿದ್ಯಾರ್ಥಿಗಳು ಇಲ್ಲಿ ಜಮಾಯಿಸಿದ್ದಾರೆ. ಆದ್ದರಿಂದ ನಾವು ನಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದ ಬಾಂಗ್ಲಾದೇಶ​ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts