

UI & Max: ತೆಲುಗು ಸಿನಿಮಾ 'ಪುಷ್ಪ 2' ಹಾವಳಿ ನಡುವೆ ಅಖಾಡಕ್ಕಿಳಿದ ಎರಡು ಬಹುನಿರೀಕ್ಷಿತ ಕನ್ನಡ ಚಿತ್ರಗಳು ಇದೀಗ ಭಾರತೀಯ ಬಾಕ್ಸ್ ಆಫೀಸ್ನ ಧೂಳೆಬ್ಬಿಸುತ್ತಿರುವುದು ಸದ್ಯ ಕನ್ನಡಿಗರಲ್ಲಿ ಅತೀವ ಸಂತಸ ತಂದಿದೆ. ಇದೇ ಡಿ.20ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದ ರಿಯಲ್ ಸ್ಟಾರ್, ನಟ ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಯುಐ’ ಸಿನಿಮಾ ಒಂದೆಡೆಯಾದರೆ, ಉಪ್ಪಿ ಚಿತ್ರ ಎಂಟ್ರಿ ಕೊಟ್ಟ ಐದು ದಿನಗಳ ನಂತರ ತೆರೆಗೆ ಅಪ್ಪಳಿಸಿದ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾದ ಅಬ್ಬರ ಮತ್ತೊಂದೆಡೆ. ಸ್ಟಾರ್ ನಟರ ಚಿತ್ರಗಳು ಸದ್ಯ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಕಾಣುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ.
ಈ ಹಿಂದೆಯೇ ಇಬ್ಬರೂ ಸ್ಟಾರ್ ಹೀರೋಗಳ ಸಿನಿಮಾಗಳು ಕೇವಲ ಐದು ದಿನಗಳ ಹಿಂದೆ-ಮುಂದೆ ತೆರೆ ಕಾಣುತ್ತಿರುವ ವಿಷಯ ತಿಳಿದು ಕನ್ನಡ ಸಿನಿಪ್ರಿಯರು ಭಾರೀ ಥ್ರಿಲ್ ಆಗಿದ್ದರು. ಸಮಾಜದ ಹಲವು ವಿಷಯಗಳನ್ನು ಹೊತ್ತು ಜನರ ತಲೆಗೆ ಕೊಂಚ ಕೆಲಸ ಕೊಟ್ಟ ಉಪೇಂದ್ರ, 'ಯುಐ' ಮೂಲಕ ಜನರಿಗೆ ಸಾಕಷ್ಟು ವಿಷಯಗಳ ಬಗ್ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸಿಮಮ್ ಮಾಸ್ ಅಂಶವನ್ನೇ ತುಂಬಿಕೊಂಡಿರುವ 'ಮ್ಯಾಕ್ಸ್', ಸಿನಿಪ್ರಿಯರನ್ನು ಸೀಟಿನ ಅಂಚಿಗೆ ಮಾತ್ರ ಕರೆದೊಯ್ಯದೆ, ಚಿತ್ರದ ಕೊನೆಯವರೆಗೂ ಕೌತುಕವನ್ನು ಉಳಿಸಿಕೊಳ್ಳುವಂತೆ ಮಾಡಿರುವುದು ವಿಶೇಷ.
ಸದ್ಯ ಸುದೀಪ್ 'ಮ್ಯಾಕ್ಸ್' ಮತ್ತು ಉಪ್ಪಿ 'ಯುಐ' ಸಿನಿಮಾಗಳು ಇತರೆ ಭಾಷೆಯ ಚಿತ್ರಗಳ ಸದ್ದನ್ನು ಅಡಗಿಸಿ, ಕನ್ನಡ ಚಿತ್ರಗಳ ಅಬ್ಬರವನ್ನು ಜಾಗತಿಕ ಮಟ್ಟದಲ್ಲಿ ವ್ಯಾಪಿಸಿರುವುದು ಇದೀಗ ಪ್ರೇಕ್ಷಕರ ಗಮನಸೆಳೆದಿದೆ. ಎರಡು ಭಿನ್ನ ಕಥೆಗಳು, ಭಿನ್ನ ಜಾನರ್ಗಳ ಸಿನಿಮಾ ವರ್ಷದ ಕೊನೆಯಲ್ಲಿ ಚಿತ್ರಮಂದಿರಕ್ಕೆ ಅಪ್ಪಳಿಸಿದ್ದಲ್ಲದೇ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದ ಜನರನ್ನು, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾತಿ ಹಾಕುವಂತೆ ಮೋಡಿ ಮಾಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಅಸಲಿಗೆ ಎರಡು ಸಿನಿಮಾಗಳು ರಿಲೀಸ್ ಆದ ದಿನದಿಂದ ಇಂದಿನವರೆಗೆ ಬಾಕ್ಸ್ ಆಫೀಸ್ನಲ್ಲಿ ಕಂಡ ಗಳಿಕೆ ಎಷ್ಟು ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.
ದಿನ 1: 8.7 ಕೋಟಿ ರೂ.
ದಿನ 2: 3.85 ಕೋಟಿ ರೂ.
ದಿನ 3: 4.7 ಕೋಟಿ ರೂ.
ದಿನ 4: 4.75 ಕೋಟಿ ರೂ.
ದಿನ 5: 5.50 ಕೋಟಿ ರೂ. (ಆರಂಭಿಕ ಅಂದಾಜು)
ಒಟ್ಟು - 27.50* ಕೋಟಿ ರೂ.
ದಿನ 1: 6.95 ಕೋಟಿ ರೂ.
ದಿನ 2: 5.6 ಕೋಟಿ ರೂ.
ದಿನ 3: 5.95 ಕೋಟಿ ರೂ.
ದಿನ 4: 2.3 ಕೋಟಿ ರೂ.
ದಿನ 5: 2.1 ಕೋಟಿ ರೂ.
ದಿನ 6: 2.35 ಕೋಟಿ ರೂ.
ದಿನ 7: 1.05 ಕೋಟಿ ರೂ.
ವಾರ 1- 26.3 ಕೋಟಿ ರೂ.
ದಿನ 8: 0.95 ಕೋಟಿ ರೂ.
ದಿನ 9: 1.05 ಕೋಟಿ ರೂ.
ದಿನ 10: 1.15 ಕೋಟಿ ರೂ.
ಒಟ್ಟು: 29.45* ಕೋಟಿ ರೂಪಾಯಿ,(ಏಜೆನ್ಸೀಸ್).