

ಮೊದಲ ಮೂರು ವಾರಗಳ ಕಾಲ ಜಗದೀಶ್ ಒಬ್ಬರೇ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದರು. ಜಗದೀಶ್ ಮನೆಯಿಂದ ಹೊರಗೆ ಹೋದ ಬಳಿಕ ಗುಂಪುಗಾರಿಕೆ, ಅನವಶ್ಯಕ ಮಾತುಗಳಿಂದ ಮನೆಯ ವಾತಾವರಣವೇ ಹಾಳಾಗಿತ್ತು.
ಇದೀಗ ನಿನ್ನೆ ನಡೆದ ಫೋಟೋ ಉರುಳಿಸುವ ಫೋಟೋ ಟಾಸ್ಕ್ನಲ್ಲಿ ಗರದ್ದು ಉಗ್ರಂ ಮಂಜು ಮನೆಯ ಕ್ಯಾಪಟ್ನ್ ಆಗಿದ್ದಾರೆ. ಅಲ್ಲದೇ ವಾರ ಪೂರ್ತಿ ತಮ್ಮನ್ನ ತಾವು ಎಲ್ಲಾ ರೀತಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಈ ವಾರ ಉಗ್ರಂ ಮಂಜು ಕ್ಯಾಪ್ಟನ್ ಆಗುತ್ತಾರಾ ಎಂಬ ಕುತೂಹಲ ಮೂಡಿದೆ.
ಅದರ ಜೊತೆಗೆ ಮಂಜುಗೆ ಈ ವಾರ ಕಿಚ್ಚನ ಚಪ್ಪಾಳೆ ಸಿಗಬೇಕು. ಬಹಳ ಅದ್ಭುತವಾಗಿ ಮಂಜು ಆಟ ಆಡಿದ್ದಾರೆ. ಹೀಗಾಗಿ ಅವರಿಗೆ ಕಿಚ್ಚನ ಚಪ್ಪಾಳೆ ಬೇಕೇ ಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ, ಕಿಚ್ಚ ಅವರು ಯಾರಿಗೆ ಚಪ್ಪಾಳೆ ತಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಲ್ಲದೇ, ಉಗ್ರಂ ಮಂಜು, ಗೌತಮಿ ಜಾಧವ್, ಗೋಲ್ಡ್ ಸುರೇಶ್ ಗೆ ಈ ವಾರ ತಾವೇ ಕ್ಯಾಪ್ಟನ್ ಆಗಬೇಕು ಎಂದು ಬಯಸುತ್ತಿದ್ದರು. ಕ್ಯಾಪ್ಟನ್ಸಿ ಓಟದಲ್ಲಿ ಮಂಜು ಗೆದ್ದಿದ್ದಾರೆ. ಆದ್ರೆ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಸದ್ಯ 8 ವಾರಗಳ ಬಳಿಕ ಬಿಗ್ಬಾಸ್ ಮನೆಯ ಟಾಸ್ಕ್ಗಳು ಮತ್ತಷ್ಟು ಕಠಿಣವಾಗುತ್ತಿದೆ. ಸ್ಪರ್ಧಿಗಳು ಬಿಬಿ ಮನೆಯದಲ್ಲಿ ಉಳಿದುಕೊಳ್ಳಲು ಶಕ್ತಿ ಮೀರಿ ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿದ್ದಾರೆ.