

ನವದೆಹಲಿ: ಕರೊನಾ ವೈರಸ್ ಸಂಕಷ್ಟ ಹೆಚ್ಚಾದಂತೆ ಶೈಕ್ಷಣಿಕ ಚಟುವಟಿಕೆಗಳ ಪುನಾರಂಭದ ಮೇಲೆ ಅನಿಶ್ಚಿತತೆಯ ಕರಿ ನೆರಳು ಆವರಿಸುತ್ತಿದೆ. ನಡೆಯೋದೇ ಅನುಮಾನ ಎಂದುಕೊಂಡಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ.
ಕೆಲ ರಾಜ್ಯಗಳಲ್ಲಿ ಕಾಲೇಜು ಹಾಗೂ ಪದವಿ ಪರೀಕ್ಷೆಯನ್ನು ರದ್ದು ಮಾಡಿವೆ. ಈ ಕಾರಣಕ್ಕಾಗಿ ದೇಶಾದ್ಯಂತ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಬಗ್ಗೆ ಅನುಮಾನ ಉಂಟಾಗಿತ್ತು. ಇದೀಗ ಈ ಗೊಂದಲಗಳನ್ನು ಯುಜಿಸಿ ಪರಿಹರಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಇದನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಅಂತಿಮ ವರ್ಷ ಅಥವಾ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಹಾಗೂ ಸೆಪ್ಟಂಬರ್ ಅಂತ್ಯದಲ್ಲಿ ಪರೀಕ್ಷೆ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಪರೀಕ್ಷೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡುತ್ತಿದ್ದಂತೆ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಮಾರ್ಗಸೂಚಿಗಳನ್ನು ನೀಡಿದೆ.
ಮಾರ್ಗಸೂಚಿ ಮುಖ್ಯಾಂಶಗಳು: