

ಉಗಾಂಡಾ: ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ಸೆಪ್ಟೆಂಬರ್ 10 ರಂದು ಈ ವಿಚಿತ್ರ ಮದುವೆ ನಡೆದಿದೆ. ವ್ಯಕ್ತಿಯೊಬ್ಬ ಏಕಕಾಲಕ್ಕೆ ಏಳು ಯುವತಿಯರನ್ನು ಮದುವೆಯಾಗಿದ್ದು, ಮತ್ತೆ ಇನ್ನಷ್ಟು ಯುವತಿಯರನ್ನು ಮದುವೆ ಆಗುವ ಯೋಚನೆ ಇದೆ ಎಂದು ಘೋಷಣೆ ಮಾಡಿದ್ದಾನೆ.
ಒಬ್ಬ ವ್ಯಕ್ತಿ ಒಬ್ಬರಲ್ಲ ಇಬ್ಬರಲ್ಲ ಏಳು ಯುವತಿಯರನ್ನು ಏಕಕಾಲಕ್ಕೆ ಮದುವೆಯಾದ. ಈ ಅಭೂತಪೂರ್ವ ಮದುವೆ ಉಗಾಂಡಾದಲ್ಲಿ ನಡೆದಿದೆ. ಹಜ್ ಹಬೀಬ್ ಎನ್ಸಿಕೊನ್ನೆನ್ ಒಂದೇ ದಿನದಲ್ಲಿ ಏಳು ಮಹಿಳೆಯರನ್ನು ಮದುವೆಯಾದ ಇಬ್ಬರು ಹೆಂಡತಿಯರು ತನ್ನ ಸಹೋದರಿಯರೆಂದು ತಿಳಿದು ಅವನು ಆಘಾತಕ್ಕೊಳಗಾದನು. ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವರದಿಯೊಂದರ ಪ್ರಕಾರ, ಸೆಪ್ಟೆಂಬರ್ 10 ರಂದು ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ವಿಚಿತ್ರ ಮದುವೆ ನಡೆದಿದೆ. ಈ ಹಜ್ ಹಬೀಬ್ ಏಳು ಮಹಿಳೆಯರನ್ನು ವಿವಾಹವಾದರು. ಸಾಯುವವರೆಗೂ ಪತ್ನಿಯರ ಜೊತೆ ಬಾಳುತ್ತೇನೆ ಎಂದು ಪ್ರಮಾಣ ಮಾಡಿದರು.
ಈ ಕುರಿತಾಗಿ ಮಾತನಾಡಿದ ಹಜ್ ಹಬೀಬ್, ಹೆಂಡತಿಯರಲ್ಲಿ ಅಸೂಯೆ ಬೆಳೆಯಬಾರದು ಅದಕ್ಕೇ ಅವರೆಲ್ಲರನ್ನೂ ಒಂದೇ ದಿನ ಮದುವೆ ಆಗಿದ್ದೇನೆ. ನಾನು ದೊಡ್ಡ ಮತ್ತು ಸಂತೋಷದ ಕುಟುಂಬವನ್ನು ಬಯಸುತ್ತೇನೆ. ನಮ್ಮ ಕುಟುಂಬದಲ್ಲಿ ಬಹುಪತ್ನಿತ್ವವಿದೆ. ಅಜ್ಜನಿಗೆ ಒಂದೇ ಮನೆಯಲ್ಲಿ ಆರು ಹೆಂಡತಿಯರಿದ್ದರು. ತಂದೆಗೆ ಐವರು ಹೆಂಡಿರು. ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾನೆ.