ಯುಜಿ ಸಿಇಟಿ 2ನೇ ಸುತ್ತು: 29ರಂದು ದಾಖಲಾತಿ ಪರಿಶೀಲನೆ

KDCET
Published on

ಬೆಂಗಳೂರು ಯುಜಿಸಿಇಟಿ-23 ದಾಖಲೆಗಳ ಪರಿಶೀಲನೆ ವೇಳೆ ಗೈರು ಹಾಜರಾದ ಅಭ್ಯರ್ಥಿಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆಯ ಅರ್ಹತೆ ಪಡೆಯಲು ಆ್ಲೈನ್‌ನಲ್ಲಿ ದಾಖಲಾತಿ ಪರಿಶೀಲನೆಯನ್ನು ಆ.29ರಂದು ಪ್ರಾಧಿಕಾರದ ಆವರಣದಲ್ಲಿ ನಡೆಸಲಿದೆ.

ಬಿಇಒ ಕಚೇರಿಯಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಪರಿಶೀಲಿಸಿಕೊಳ್ಳದ ಅಭ್ಯರ್ಥಿಗಳು ಅಥವಾ ಗೈರು ಹಾಜರಾಗಿರುವವರು 2ನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದ್ದಲ್ಲಿ ಆ.29ರಂದು ಎಲ್ಲ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಗೆ ಆಗಮಿಸುವಂತೆ ಸೂಚಿಸಿದೆ. ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪರಿಶೀಲನಾ ಕಾರ್ಯ ನಡೆಯಲಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net