

ಉಡುಪಿ : ರಾಜ್ಯಾದ್ಯಂತ ಕರೊನಾ ಸೋಂಕು ಹೆಚ್ಚುತ್ತಿರುವಂತೆಯೇ ಉಡುಪಿ ಜಿಲ್ಲೆಯಲ್ಲಿ ಇಂದು ಹೊಸದಾಗಿ 115 ಕರೊನಾ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿಯಾದ 69 ವರ್ಷ ವಯಸ್ಸಿನ ವೃದ್ಧರೊಬ್ಬರು ಕರೊನಾದಿಂದಾಗಿ ಸಾವಪ್ಪಿದ್ದಾರೆ.
ಇಂದು ಜಿಲ್ಲೆಯಲ್ಲಿ 2,430 ಜನರ ಸ್ವಾಬ್ಅನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, ಅದರಲ್ಲಿ 115 ಮಂದಿಗೆ ಪಾಸಿಟಿವ್ ಬಂದಿದೆ. ಈ ಪೈಕಿ 70 ಪ್ರಕರಣಗಳು ಮಣಿಪಾಲದ ಎಂಐಟಿಯಲ್ಲೇ ದಾಖಲಾಗಿವೆ, ಎಂಐಟಿ ಕ್ಯಾಂಪಸ್ನಲ್ಲಿ ಈವರೆಗೆ 902 ಮಂದಿಗೆ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.