ಅಡ್ಡಬಂದ ನಾಯಿ ಪ್ರಾಣ ಉಳಿಸಲು ಹೋಗಿ ಉಡುಪಿಯಲ್ಲಿ ನವ ವಿವಾಹಿತೆ ಸಾವು

udupi crime
Published on

ಉಡುಪಿ:  ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನಿಂದ ಕೆಳಗೆ ಬಿದ್ದು ನವವಿವಾಹಿತೆ ಮೃತಪಟ್ಟಿದ್ದಾಳೆ.

ನೀಕ್ಷಾ  ಮೃತ ಯುವತಿ. ಕಾರ್ಕಳ ತೆಳ್ಳಾರು ನಿವಾಸಿಯಾಗಿದ್ದಳು. ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನಿಂದ ಕೆಳಗೆ ಬಿದ್ದು ನವವಿವಾಹಿತೆ ಮೃತಪಟ್ಟಿದ್ದಾಳೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

2 ತಿಂಗಳ ಹಿಂದಷ್ಟೇ ವಿಶಾಲ್ ಎಂಬುವರೊಂದಿಗೆ ನೀಕ್ಷಾ ಮದುವೆಯಾಗಿದ್ದರು. ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಉಡುಪಿಯ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಬೈಕ್‌ಗೆ ಅಚಾನಕ್‌ ಆಗಿ ಶ್ವಾನ ಅಡ್ಡ ಬಂದಿದೆ. ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮುಗುಚಿ ಬಿದ್ದಿದ್ದಾರೆ.

ಬೈಕ್ ಹಿಂಭಾಗದಲ್ಲಿದ್ದ ನೀಕ್ಷಾ ತಲೆಗೆ ಗಂಭೀರವಾಗಿದೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಶಾಲ್‌ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. 

https://www.vijayavani.net/sonakshi-sinha-pregnant-netizens-are-curious-after-she-visits-hospital-with-husband-zaheer-iqbal

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net