ಉಡುಪಿ ಟಾಯ್ಲೆಟ್ ಪ್ರಕರಣ; ತನಿಖಾ ತಂಡ ಬದಲಾಗುತ್ತಿದ್ದಂತೆ ತೀವ್ರಗೊಂಡ ವಿಚಾರಣೆ

udupi
Published on

ಉಡುಪಿ: ಇತ್ತೀಚೆಗಷ್ಟೇ ಉಡುಪಿ ತನಿಖಾ ತಂಡ ಬದಲಾಗುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿದ್ದವು. ಇದೀಗ ಮಹಿಳಾ ಪೊಲೀಸರೇ ಹೆಚ್ಚಿರುವ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.

ತನಿಖಾ ತಂಡ ಬದಲಾಗುತ್ತಿದ್ದಂತೆ ವಿಚಾರಣೆ ತೀವ್ರಗೊಂಡಿದ್ದು ಕಳೆದ ಆರು ತಿಂಗಳ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಪೊಲೀಸರು. ಕಾಲೇಜು ಪರಿಸರದ ಪ್ರತಿಯೊಂದು ಚಲನವಲನ ಗಮನಹರಿಸಲಿದ್ದು, ವಿದ್ಯಾರ್ಥಿನಿಯರು ಹಾಗೂ ಪರಿಸರದಲ್ಲಿ ಆಪರೇಟ್ ಆದ ಮೊಬೈಲ್​ಗಳ ಸಿಡಿಆರ್ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.

ಕಾಲೇಜಿನ ಇತರ ಸಮಸ್ಯೆಗಳ ಬಗ್ಗೆಯೂ ವಿದ್ಯಾರ್ಥಿನಿಯರು ಮಾತನಾಡಿಕೊಂಡಿದ್ದು ಈ ಕುರಿತಾಗಿಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅದಲ್ಲದೇ ಆರೋಪಿತ ವಿದ್ಯಾರ್ಥಿನಿಯರಿಂದಲೂ ಮಾಹಿತಿ ಪಡೆಯಲಾಗುತ್ತಿದ್ದು ವಿಡಿಯೋ ಪತ್ತೆಯ ನಂತರ ಸಮಗ್ರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸದ್ಯ ಸಾಂದರ್ಭಿಕ ವಿಚಾರಗಳ ಬಗ್ಗೆ ಆರೋಪಿಗಳಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net