ಕಾಮಗಾರಿ ಮುಗಿದರೂ ಬಿಡುಗಡೆಯಾಗದ ಹಣ; ಸಿದ್ದರಾಮಯ್ಯ ಸರ್ಕಾರವಾದರೂ ಬಾಕಿ ತೀರಿಸಲಿ ಎನ್ನುತ್ತಿರುವ ಗುತ್ತಿಗೆದಾರರು…

siddaramaiah
cm siddaramaiah request
Published on

ಹುಬ್ಬಳ್ಳಿ: ಸರ್ಕಾರಗಳ ತಿಕ್ಕಾಟದ ನಡುವೆ ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ಬಿಲ್​ಗಳ ಬಾಕಿ ಹಣ ಗುತ್ತಿಗೆದಾರರ ಕೈ ಸೇರಿಲ್ಲ.

ಅಭಿವೃದ್ದಿ ಕಾಮಗಾರಿಗಳು ಮುಗಿದರೂ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಇದ್ದು ಹಣ ಇನ್ನೂ ಬಿಡುಗಡೆ ಆಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಿಂದ ಗುತ್ತಿಗೆದಾರರಿಗೆ ನಯಾಪೈಸೆ ಬಿಡುಗಡೆ ಆಗಿಲ್ಲ ಎನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯ ಗುತ್ತಿಗೆದಾರರಿಗೆ ಸುಮಾರು 315 ಕೋಟಿ ಬಾಕಿ ಬಿಡುಗಡೆಯಾಗಬೇಕಿದೆ. ಇನ್ನು ಹಣ ಬಿಡುಗಡೆ ಆಗದ ಕಾರಣ ನೂರಾರು ಕಾಮಗಾರಿಗಳು‌ ಅರ್ಧಕ್ಕೆ ನಿಂತಿವೆ.

ಬಸವರಾಜ ಬೊಮ್ಮಾಯಿ ಸರ್ಕಾರ, ಬೇಕಾಬಿಟ್ಟಿಯಾಗಿ ಟೆಂಡರ್ ಕರೆದಿದ್ದಾರೆ ಎಂದು ಆರೋಪಿಸಲಾಗುತ್ತಿದ್ದು, ಈ ಹಿಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.

ಇದೀಗ ಕಾಮಗಾರಿಗಳನ್ನ ಮುಗಿಸಿ ವರ್ಷಗಳೇ ಕಳೆದ್ರೂ ಬಿಲ್‌ ಬಿಡುಗಡೆ ಆಗುತ್ತಿಲ್ಲ. ಬಿಲ್‌ಗಾಗಿ ಕಚೇರಿ ಅಲೆದು ಅಲೆದು ಗುತ್ತಿಗೆದಾರರು ಸುಸ್ತಾಗಿ ನಿಂತಿದ್ದಾರೆ. ಇದೀಗ ಅವರು ಸಿದ್ದರಾಮಯ್ಯ ಸರ್ಕಾರವಾದ್ರೂ ಹಣ ಬಿಡುಗಡೆ ಮಾಡಲಿ ಎನ್ನುತ್ತಿದ್ದಾರೆ. ಆದರೆ ಒಂದೆಡೆ ಗ್ಯಾರಂಟಿ‌ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದು ಸರ್ಕಾರ ಹೆಣಗಾಟ ನಡೆಸುತ್ತಿದ್ದು ಹಣ ಯಾವಾಗ ಬಿಡುಗಡೆ ಆಗಬಹುದು ಎನ್ನುವುದು ಇನ್ನೂ ತಿಳಿಯುತ್ತಿಲ್ಲ. (ದಿಗ್ವಿಜಯ ನ್ಯೂಸ್ ಮಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net