

ಚೆನ್ನೈ: ತಮಿಳುನಾಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಬಡ್ತಿ ನೀಡುವ ಕುರಿತಾದ ಊಹಾಪೋಹಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ, ಹಾಗೂ ಸಚಿವ ಉದಯನಿಧಿ ಸ್ಟಾಲಿನ್, ‘ಡಿಎಂಕೆ ಸರ್ಕಾರದ ಎಲ್ಲ ಸಚಿವರೂ ಉಪ ಮುಖ್ಯಮಂತ್ರಿಗಳೇ’ ಎಂದು ನಗುತ್ತಲೇ ಹೇಳಿದರು.
ಇದನ್ನೂ ಓದಿ: ಕನ್ವರ್ ಯಾತ್ರೆ: ಟ್ರಕ್ ಪಲ್ಟಿಯಾಗಿ 10 ಭಕ್ತರಿಗೆ ಗಾಯ
ಉದಯನಿಧಿ ಈ ಹಿಂದೆಯೂ ಇದೇ ಮಾತನ್ನು ಹೇಳಿದ್ದು, ಯಾವುದೇ ಹುದ್ದೆ ನೀಡಿದರೂ ಯುವಜನ ಇಲಾಖೆ ಕಾರ್ಯದರ್ಶಿ ಹುದ್ದೆಯೇ ನೆಚ್ಚಿನ ಹುದ್ದೆ ಎಂದು ವಿವರಿಸಿದರು.
2026ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲುವುದು ಡಿಎಂಕೆಯ ಸದ್ಯದ ಗುರಿ. ಕಳೆದ ಲೋಕಸಭಾ ಚುನಾವಣೆಯಂತೆ ವಿಧಾನ ಸಭಾ ಚುನಾವಣೆಯಲ್ಲೂ ಶ್ರಮಿಸಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಮ್ಮ ಪಕ್ಷ ಗೆಲ್ಲುತ್ತದೆ. ಎಂ.ಕೆ.ಸ್ಟಾಲಿನ್ ಮತ್ತೆ ತಮಿಳುನಾಡಿನ ಸಿಎಂ ಆಗಲಿದ್ದಾರೆ. 2026ರಲ್ಲಿ ಡಿಎಂಕೆ ಗೆಲ್ಲುವುದು ಖಚಿತ ಎಂದರು.
ಯುವ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹತ್ತು ನಿಮಿಷ ಮೀಸಲಿಡಬೇಕು ಎಂದು ಸಲಹೆ ನೀಡಿದರು.