'ನನ್ನನ್ನು ಟೀಕಿಸಿದರೂ ಸರಿ...ನಾನು ಆ ಕೆಲಸ ಮಾಡುವುದಿಲ್ಲ': ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

Uddav Takrey 3 Jan 20
Published on

ಮುಂಬೈ: ಲಾಕ್​ಡೌನ್​ 4.0ದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಬಹುತೇಕ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.

ಕೇಂದ್ರದಿಂದ ಮಾರ್ಗಸೂಚಿ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರಗಳೂ ಕೂಡ ತಮ್ಮಲ್ಲಿನ ಪರಿಸ್ಥಿತಿಗೆ ಅನ್ವಯ ಆಗುವಂತೆ ಲಾಕ್​ಡೌನ್​ ಸಡಿಲಿಕೆ ಮಾಡಿಕೊಳ್ಳುವ ಜತೆ ಕೊವಿಡ್​-19 ನಿಯಂತ್ರಣಾ ಕ್ರಮಗಳನ್ನೂ ಕೈಗೊಳ್ಳುತ್ತಿವೆ.

ಇದೀಗ ದೇಶದಲ್ಲಿ ಅತ್ಯಂತ ಹೆಚ್ಚು, ಅಂದರೆ 35,000 ಕೊವಿಡ್​ ಸೋಂಕಿತರು ಇರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಆನ್​ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವಿಡ್​ ವಿಪತ್ತನ್ನು ಮುಂಗಾರು ಪ್ರವೇಶದ ಒಳಗೇ ತೊಡೆದು ಹಾಕಲು ಇಚ್ಛಿಸುತ್ತೇವೆ. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.

ರಾಜ್ಯದಲ್ಲಿ ಕರೊನಾ ಪ್ರಸರಣವನ್ನು ನಾವು ನಿಯಂತ್ರಣಕ್ಕೆ ತಂದಿದ್ದೇವೆ. ಹಾಗಾಗಿ ಇನ್ನು ಲಾಕ್​ಡೌನ್​ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ನ್​ ಝೋನ್​​ಗಳನ್ನು ಗ್ರೀನ್​ ಝೋನ್​ಗಳನ್ನಾಗಿಯೇ ಇಟ್ಟುಕೊಳ್ಳುವುದೇ ಒಂದು ಸವಾಲಾಗಿದೆ. ಆದರೂ ಅಲ್ಲಿ ಸ್ವಲ್ಪ ಸಡಿಲಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಈಗಾಗಲೇ 50,000ಕೈಗಾರಿಕೆಗಳ ಮರು ಪ್ರಾರಂಭಕ್ಕೆ ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದ್ದೇವೆ. ಆದರೆ ಜಾಸ್ತಿ ಸಡಿಲಿಕೆ ಸದ್ಯಕ್ಕೆ ಸಾಧ್ಯವೇ ಇಲ್ಲ.

ನನಗೆ ಗೊತ್ತು ಲಾಕ್​ಡೌನ್ ಸಡಿಲ ಮಾಡದೆ ಇದ್ದರೆ ನಾನು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಮೆರಿಕ, ಯುರೋಪ್​ ದೇಶಗಳಲ್ಲಿ ಲಾಕ್​ಡೌನ್ ಸಡಿಲಿಕೆಯಿಂದ ಏನಾಯಿತು? ಕೊವಿಡ್​ ಪ್ರಮಾಣ ಎಷ್ಟು ಹೆಚ್ಚಾಯಿತು ಎಂದು ನಾವು ನೋಡಿದ್ದೇವೆ. ಹಾಗಾಗಿ ಸದ್ಯಕ್ಕೆ ನಿರ್ಬಂಧಗಳ ಸಂಪೂರ್ಣ ತೆರವು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ವಲಸೆ ಕಾರ್ಮಿಕರು ದಯವಿಟ್ಟು ನಡೆಯುವುದನ್ನು ಬಿಡಿ ಎಂದೂ ಮನವಿ ಮಾಡಿದ್ದಾರೆ.

ಕೇಂದ್ರದಿಂದ ಲಾಕ್​ಡೌನ್​ ವಿಸ್ತರಣಾ ಅವಧಿ ಪ್ರಕಟಗೊಳ್ಳುವ ಮೊದಲೇ ಮಹಾರಾಷ್ಟ್ರ ಮೇ 31ರವರೆಗೆ ಲಾಕ್​ಡೌನ್ ಮುಂದುವರಿಸಿ ಆದೇಶ ನೀಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net