ಹಲ್ಲುಜ್ಜುವಾಗ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ!; ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮುಂದೇನಾಯ್ತು?

Udaipur Man gulps 12-cm-long toothbrush taken out from stomach without surgery
Published on

ರಾಜಸ್ಥಾನ: ಮಕ್ಕಳು ಆಟವಾಡುತ್ತಾ ಸಣ್ಣಪುಟ್ಟ ವಸ್ತುಗಳನ್ನು ನುಂಗುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುತ್ತಾ ಟೂತ್‌ಬ್ರಶ್‌ನ್ನೇ ನುಂಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.

ಗೋಪಾಲ್ ಸಿಂಗ್ ರಾವ್ (53) ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಗಂಟಲಿನೊಳಗೆ ಹೋಗಿದೆ. ಈತ ಉದಯಪುರದ ಚಿತ್ತೋರ್‌ನ ನಿವಾಸಿಯಾಗಿದ್ದಾನೆ.

ಗೋಪಾಲ್ ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಹೊಟ್ಟೆಯೊಳಗೆ ಹೋಗಿದೆ. ತಕ್ಷಣ ಬಾಯಿಯೊಳಗೆ ಕೈ ಹಾಕಿ ಅದನ್ನು ಹೊರತೆಗೆಯೋಣ ಅಂದುಕೊಂಡರೆ ಬ್ರಶ್ ಹೊಟ್ಟೆಯೊಳಗೆ ಜಾರಿ ಹೋಗಿದೆ. ತಕ್ಷಣ ಗೋಪಾಲ್‌ ಸಿಂಗ್‌ಗೆ ಉಸಿರುಗಟ್ಟೋಕೆ ಆರಂಭವಾಯಿತು. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಅಲ್ಲಿನ ವೈದ್ಯರು ಟೂತ್ ಬ್ರಶ್ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗೋಪಾಲ್‌ ಸಿಂಗ್‌ನ್ನು ಅಮೆರಿಕನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ರಷ್ ಹೊಟ್ಟೆಯಲ್ಲಿ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.

ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಜೆ ತ್ರಿವೇದಿ ಅವರ ತಂಡವು ಎಂಡೋಸ್ಕೋಪಿಕ್ ವಿಧಾನದಿಂದ ಬ್ರಶ್‌ನ್ನು ತೆಗೆದುಹಾಕಲು ನಿರ್ಧರಿಸಿತು. ಅಚ್ಚರಿಯ ವಿಚಾರವೆಂದರೆ. ಶಸ್ತ್ರಚಿಕಿತ್ಸೆಯಿಲ್ಲದೆ ವೈದ್ಯರು ಹಲ್ಲುಜ್ಜುವ ಬ್ರಷ್ ಅನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net