ಯುಎಇ ಶಂಕರ ಸೇವಾ ಸಮಿತಿಯಿಂದ ಆದಿ ಶಂಕರರ ಮತ್ತು ಆಚಾರ್ಯ ರಾಮಾನುಜರ ಜಯಂತಿ ಅದ್ಧೂರಿ ಆಚರಣೆ! Shankara Seva Samiti

Shankara Seva Samiti
Published on

Shankara Seva Samiti : ಯುಎಇ ಶಂಕರ ಸೇವಾ ಸಮಿತಿ ವತಿಯಿಂದ ಮೇ 3ರಂದು ಆಚಾರ್ಯರಾದ, ಶ್ರೀ ಆದಿ ಶಂಕರರ ಮತ್ತು ಶ್ರೀ ಆಚಾರ್ಯ ರಾಮಾನುಜರ ಜಯಂತಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ನಮ್ಮ ಮೂಲ ಉದ್ದೇಶ ನಾವುಗಳೆಲ್ಲರೂ ಸಾಗರದಾಚೆ ನಾಡಿನಲ್ಲಿ ವಾಸವಿರುವುದರಿಂದ ನಮ್ಮ ಎಲ್ಲ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಬಹುಮುಖ್ಯವಾಗಿ ನಮ್ಮೆಲ್ಲರ ಮುಂದಿನ ಪೀಳಿಗೆಗಳು ಇಲ್ಲೇ ಬೆಳೆಯುತ್ತಿರುವುದರಿಂದ ಅವರುಗಳಿಗೆ ಯಾವುದೇ ಆಚರಣೆಯ ವಿಚಾರಗಳು ಮತ್ತು ಮೌಲ್ಯಗಳು ತಿಳಿಯುವುದಕ್ಕೆ ಅವಕಾಶವಿಲ್ಲದ್ದರಿಂದ ಶ್ರೀ ಶಂಕರ ಸೇವಾ ಸಮಿತಿಯನ್ನು ಪ್ರಾರಂಭಿಸಿದ್ದೇವೆ. 2022ರಿಂದ ಗಣೇಶೋತ್ಸವ, ಶಿವರಾತ್ರಿ ಆಚರಣೆ, ಶ್ರೀ ರಾಮೋತ್ಸವ, ದಸರಾ ಆಚರಣೆ ಮತ್ತು ಆಚಾರ್ಯತ್ರಯರ ಜಯಂತ್ಯೋತ್ಸವವನ್ನು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂದು ವಿಜೃಂಭಣೆಯಿಂದ ಎಲ್ಲ ಸಹೃದಯರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಸಮಿತಿ ಹೇಳಿದೆ.

Shankara Seva Samiti 2

ಈ ಎಲ್ಲ ಕಾರ್ಯಕ್ರಮಗಳ ಯಶಸ್ಸಿನಿಂದ, ಎಲ್ಲ ಸಹೃದಯರು ಮುಂಬರುವ ದಿನಗಳಲ್ಲಿ ಮತ್ತಷ್ಟು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಚರಿಸಲು ಅಪೇಕ್ಷಿಸುತ್ತಿರುವುದರಿಂದ, ಶ್ರೀ ಶಂಕರ ಸೇವಾ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದೇವೆ.

ಮೇ ತಿಂಗಳ 3ರಂದು ಆಚಾರ್ಯರಾದ ಶ್ರೀ ಆದಿ ಶಂಕರರ ಮತ್ತು ಶ್ರೀ ಆಚಾರ್ಯ ರಾಮಾನುಜರ ಜಯಂತಿ ಉತ್ಸವವನ್ನು, ಸಂಗೀತ, ಸೌಂದರ್ಯಲಹರಿ, ವೇದ ಘೋಷ, ಭಜನೆ, ಪಕ್ಕಲ್ಲಿ ಉತ್ಸವ, ಹಾಗು ಮತ್ತಿತರರ ಕಾರ್ಯಕ್ರಮಗಳೊಂದಿಗೆ ಲಕ್ಷ್ಮೀಶ ಅಜ್ಜಂಪುರ ಅವರ ನೇತೃತ್ವದಲ್ಲಿ ಹಾಗು ಎಲ್ಲ ಸಹೃದಯರ ಸಹಕಾರದೊಂದಿಗೆ ವಿಜೃಂಭಣೆಯಿಂದ, ದುಬೈ ನಗರದಲ್ಲಿ ಆಚರಿಸಿದ್ದೇವೆ ಎಂದು ಶಂಕರ ಸೇವಾ ಸಮಿತಿ ಯುಎಇ ಒಕ್ಕೂಟ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net