ಆಪ್ ನಿಷೇಧಕ್ಕೆ ವಿಶಿಷ್ಟ ಸ್ವಾಗತ

Tiktok
Published on

ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರ ಜತೆ ನಡೆದ ಸಂಘರ್ಷದ ವೇಳೆ ಇಪ್ಪತ್ತು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ಯೋಧರೂ ಧೈರ್ಯದ ಪ್ರತ್ಯುತ್ತರವನ್ನೇ ನೀಡಿದ್ದರು.

ಈ ಮಧ್ಯೆ ಭಾರತ ಸರ್ಕಾರ ಚೀನಾದ ಜನಪ್ರಿಯ ಟಿಕ್​ಟಾಕ್, ವಿ ಚಾಟ್ ಸೇರಿದಂತೆ 59 ಆಪ್​ಗಳನ್ನು ನಿಷೇಧಿಸಿ ಚೀನಾಕ್ಕೆ ಆರ್ಥಿಕ ಆಘಾತ ಉಂಟು,ಮಾಡಿತ್ತು. ಭಾರತೀಯರೆಲ್ಲ ಈ ಕ್ಷಿಪ್ರ ಕ್ರಮವನ್ನು ಶ್ಲಾಘಿಸಿದ್ದರು.

ದೇಶದ ಪ್ರಮುಖ ಡೈರಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ಅಮೂಲ್ ಕೂಡ ಈ ನಿರ್ಧಾರವನ್ನು ವಿಭಿನ್ನವಾಗಿ ಸ್ವಾಗತಿಸಿದ್ದು, STik-with-this-STok ಎಂಬ ಶೀರ್ಷಿಕೆಯ ಡೂಡಲ್ ಮೂಲಕ ಚೀನಾ ಆಪ್​ಗಳಿಗೆ ಟಾಂಗ್ ನೀಡಿದೆ. ಈ ಡೂಡಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net