ಕುದಿಯುವ ಬಿಸಿ ನೀರಿಗೆ ಬಿದ್ದ ಎರಡು ವರ್ಷದ ಬಾಲಕ ಸಾವು! Telangana

Telangana boy
Published on

ತೆಲಂಗಾಣ: ( Telangana ) ಕುದಿಯುವ ಬಿಸಿ ನೀರಿಗೆ ಬಿದ್ದು ಮಗುವೊಂದು 2 ದಿನದಿಂದ ಸಾವು -ಬದುಕಿ ನೊಂದಿಗೆ ಹೋರಾಡಿ  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.  ಈ ಘಟನೆ ತೆಲಂಗಾಣದ  ಮುಳುಗು ಜಿಲ್ಲೆಯಲ್ಲಿ ನಡೆದಿದೆ.

ವೆಂಕಟಾಪುರಂ ಮಂಡಲದ ಶಾಂತಿನಗರ ಗ್ರಾಮದಲ್ಲಿ ನ.27ರಂದು ಸಂಜೆ ಎರಡು ವರ್ಷದ ದೇವಿಪ್ರಸಾದ್ ಎಂಬ ಬಾಲಕ ಆಟವಾಡುತ್ತಿದ್ದ ವೇಳೆ ಬಿಸಿನೀರಿನ ಬಕೆಟ್‌ಗೆ ಬಿದ್ದಿದ್ದ. ನೀರು ಕುದಿಯುತ್ತಿದ್ದರಿಂದ ಎಲ್ಲ ಕಾಲುಗಳಿಗೂ ಗಂಭೀರ ಗಾಯಗಳಾಗಿದ್ದವು.  ಸುಟ್ಟಗಾಯಗಳಿದ್ದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಸಾಗಿಸಿದ್ದಾರೆ. 

ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ವಾರಂಗಲ್ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ. ಎರಡು ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಬಾಲಕ ಸಾವನ್ನಪ್ಪಿದ್ದಾನೆ.

ಆಟವಾಡುತ್ತಿದ್ದ ಬಾಲಕನ ಸಾವು ಶಾಂತಿನಗರ ಗ್ರಾಮದಲ್ಲಿ ತಲ್ಲಣ ಮೂಡಿಸಿದೆ.  ಮನೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net