ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶ; ಸ್ಥಳದಲ್ಲೇ ಪ್ರಾಣ ಬಿಟ್ಟ ಇಬ್ಬರು ಕಾರ್ಮಿಕರು

Two workers died on the spot due to electric shock during construction work
Published on

ಶಿವಮೊಗ್ಗ: ಬೈಪಾಸ್ ರಸ್ತೆಯ ಊರುಗಡೂರಿನಲ್ಲಿ ಬುಧವಾರ ಬೆಳಗ್ಗೆ ಕಟ್ಟಡ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಚಲ್ಲನ ಸೋಮಶೇಖರ್ (35)ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಿಲ್ಲ. ಊರುಗಡೂರಿನ ಡಾ. ಅಂಬೇಡ್ಕರ್ ಭವನದ ಎದುರು ಗಂಗಾಧರ್ ಎಂಬುವರಿಗೆ ಸೇರಿದ ವಾಣಿಜ್ಯ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಈ ಕಟ್ಟಡದ ಮೂರನೇ ಮಹಡಿಯಲ್ಲಿ ಕೆಲಸಕ್ಕಾಗಿ ಬುಧವಾರ ಹೊಳೆ ಬಸ್ ನಿಲ್ದಾಣದ ಬಳಿಯಿಂದ ಸೋಮಶೇಖರ್ ಮತ್ತು ಇಬ್ಬರನ್ನು ಮಾಲೀಕ ಗಂಗಾಧರ್ ಕರೆದೊದ್ದಿದ್ದರು.

ಕೆಲಸ ಮಾಡುತ್ತಿದ್ದ ವೇಳೆ ತಗಡಿನ ಶೀಟ್‌ಗಳನ್ನು ಕೆಳಗಿನಿಂದ ಮೇಲೆ ಎತ್ತಿಕೊಳ್ಳುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ. ಕಟ್ಟಡಕ್ಕೂ ಮತ್ತು 11 ಕೆವಿ ತಂತಿಗೂ ಎರಡು ಅಡಿ ಅಂತರವಿದ್ದು, ಯಾವುದೇ ಮುಂಜಾಗ್ರತೆ ವಹಿಸಿರಲಿಲ್ಲ ಎನ್ನಲಾಗಿದೆ.

ಮತ್ತೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಿಲ್ಲ. ಎರಡೂ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net