

ಇಂಗ್ಲೆಂಡ್: ಗಿಳಿಗಳನ್ನು ಅನೇಕರು ಪ್ರೀತಿಸುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಮನೆಯಲ್ಲಿ ಗಿಳಿಗಳು ಸಾಕಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಆದರೆ ಇಬ್ಬರು ಮಹಿಳೆಯರು ಸಾಕಿದ ಗಿಳಿಗೆ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಇಂಗ್ಲೆಂಡ್ ಕಾರ್ಲಿಸ್ಲೆ ಕ್ರೌನ್ ನ್ಯಾಯಾಲಯವು ಗಿಳಿಯನ್ನು ಅತ್ಯಂತ ಕ್ರೂರವಾಗಿ ಕೊಂದ ಇಬ್ಬರು ಮಹಿಳೆಯರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.
ನಡೆದಿದ್ದೇನು?: ಟ್ರೇಸಿ ಡಿಕ್ಸನ್ ಎಂಬ 47 ವರ್ಷದ ಮಹಿಳೆ ಮತ್ತು ನಿಕೋಲಾ ಬ್ರಾಡ್ಲಿ ಎಂಬ 35 ವರ್ಷದ ಮಹಿಳೆ ಇಬ್ಬರು ಸ್ನೇಹಿತರು. ನಿಕೋಲಾ ಮತ್ತು ಟ್ರೇಸಿ ಒಂದು ದಿನ ಅವರ ಸ್ನೇಹಿತನಾದ ಮಾಜಿ ಸೈನಿಕ ಸಿನ ಪಾಲ್ ಕ್ರೂಕ್ಸ್ ಮನೆಗೆ ಹೋಗಿದ್ದಾರೆ. ಕ್ರೂಕ್ಸ್ ಆಫ್ರಿಕನ್ ಬೂದು ಗಿಳಿಯನ್ನು ಸಾಕುತ್ತಿದ್ದನು. ಅವರು ಪ್ರೀತಿಯಿಂದ ಸ್ಪಾರ್ಕಿ ಎಂದು ಹೆಸರಿಟ್ಟಿದ್ದಾರೆ. ಸ್ಪಾರ್ಕಿ ಕೆಲವು ಪದಗಳನ್ನು ಕಲಿತ ಮಾತನಾಡುತ್ತಿತ್ತು.
2022ರ ಜುಲೈ ತಿಂಗಳೀನಲ್ಲಿ ಒಂದು ದಿನ ಕಂಠಪೂರ್ತಿಯಾಗಿ ಮದ್ಯ ಸೇವಿಸಿದ್ದ ಮಹಿಳೆಯರಿಗೆ ಪ್ರಪಂಚದ ಅರಿವೆ ಇಲ್ಲದಂತೆ ಆಗಿತ್ತು. ಕುಡಿದ ಅಮಲಿನಲ್ಲಿ ನಿಕೋಲಾ ಮತ್ತು ಟ್ರೇಸಿ ಕ್ರೂಕ್ಸ್ ಮನೆಗೆ ಹೋಗಿದ್ದಾರೆ. ಈ ವೇಳೆ ಕ್ರೂಕ್ಸ್ ಮಲಗಿದ್ದ. ಮದ್ಯದ ಅಮಲಿನಲ್ಲಿದ್ದ ಮಹಿಳೆಯರ ಕಣ್ಣು ಆ ಗಿಳಿಯ ಮೇಲೆ ಬಿದ್ದಿದೆ.
ಗಿಳಿಯನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಕತ್ತು ಮುರಿದು ವಾಷಿಂಗ್ ಮೆಷಿನ್ ನಲ್ಲಿ ಎಸೆದಿದ್ದಾರೆ. ಈ ಕ್ರೂರ ಹಿಂಸೆ ಇಲ್ಲಿಗೆ ನಿಲ್ಲಲಿಲ್ಲ. ಗಿಳಿಯನ್ನು ಹೊರತೆಗೆದು ನಾಯಿಗೆ ತಿನ್ನಿಸಿ ಕುಡಿದ ಅಮಲಿನಲ್ಲಿ ಆಫ್ರಿಕನ್ ಬೂದು ಗಿಳಿಯನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದರು.
ಅದೇ ಸಮಯದಲ್ಲಿ ಕ್ರೂಕ್ಸ್ ಎಚ್ಚರವಾಗಿದೆ. ಅವರ ಚಿತ್ರಹಿಂಸೆಯಿಂದ ಗಿಳಿ ಈಗಾಗಲೇ ಸತ್ತಿರುವುದನ್ನು ನೋಡಿ ಕ್ರೂಕ್ಸ್ ಆಘಾತಕ್ಕೊಳಗಾಗಿದ್ದಾನೆ. ಅವನು ಕೋಪದಿಂದ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ತನಿಖೆ ಮುಂದುವರೆಯಿತು.
ಕೊನೆಯಲ್ಲಿ, ಟ್ರೇಸಿ ಮತ್ತು ನಿಕೋಲಸ್ ಅವರ ಅಮಾನವೀಯತೆಯು ವಿಚಾರಣೆಯಲ್ಲಿ ಸಾಬೀತಾಯಿತು. ನ್ಯಾಯಾಲಯ ಇಬ್ಬರಿಗೂ 25 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ತಮ್ಮ ಜೀವಿತಾವಧಿಯಲ್ಲಿ ಯಾವುದೇ ಪ್ರಾಣಿ ಅಥವಾ ಪಕ್ಷಿಯನ್ನು ಸಾಕದಂತೆ ನ್ಯಾಯಾಧೀಶ ಆರ್ಚರ್ ಅವರಿಗೆ ಆದೇಶಿಸಿದ್ದಾರೆ.