ಭಾರತದಲ್ಲಿ ಬಿಕಿನಿ ಧರಿಸುವಾಗ ಈ 2 ವಿಷಯ ನೆನಪಿನಲ್ಲಿರಲಿ... ಕಹಿ ಅನುಭವ ಬಿಚ್ಚಿಟ್ಟ ವಿದೇಶಿ ಯುವತಿಯರು! Foreign Women

Foreign Women
Published on

Foreign Women : ಭಾರತದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಇಬ್ಬರು ವಿದೇಶಿ ಸಹೋದರಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾರೋ ಒಬ್ಬರು ತಮ್ಮ ಅನುಮತಿಯಿಲ್ಲದೆ ತಮ್ಮ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿದ್ದಾರೆ.

ದೆಹಲಿಯ ಹೋಟೆಲ್ ಒಂದರಲ್ಲಿ ಬಿಕಿನಿ ಧರಿಸಿ ಸೂರ್ಯನ ಸ್ನಾನ ಮಾಡುತ್ತಿದ್ದಾಗ, ಒಬ್ಬ ವ್ಯಕ್ತಿ ತಮ್ಮ ಹೋಟೆಲ್ ಕೋಣೆಯ ಪರದೆಗಳನ್ನು ತೆಗೆದು ಚಿತ್ರೀಕರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

ತಮ್ಮ ಪಾಲಕರೊಂದಿಗೆ ಜಗತ್ತನ್ನು ಸುತ್ತುತ್ತಿರುವ ಸಹೋದರಿಯರಾದ ರೋರಿ ಮತ್ತು ಸೇಜ್ ಅವರಿಗೆ ಈ ಕೆಟ್ಟ ಅನುಭವವಾಗಿದೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ವ್ಯಕ್ತಿ ತನ್ನ ಫೋನ್ ಅನ್ನು ಗಾಜಿನ ಕಿಟಕಿಯ ಹಿಂದಿನಿಂದ ಹಿಡಿದು ಯುವತಿಯರ ವಿಡಿಯೋವನ್ನು ರೆಕಾರ್ಡ್ ಮಾಡುವುದನ್ನು ಸಹೋದರಿಯರು ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.

ನೀವು ಭಾರತಕ್ಕೆ ಬರುವುದಾದರೆ, ಪುರುಷರು ಅಥವಾ ಅಂಗರಕ್ಷಕರಿಲ್ಲದೆ ಒಂಟಿಯಾಗಿ ಬರಬೇಡಿ. ನೀವು ಸೂರ್ಯನ ಸ್ನಾನ ಮಾಡುತ್ತಿದ್ದರೂ ಅಥವಾ ಸಂಪೂರ್ಣವಾಗಿ ಬಟ್ಟೆ ಧರಿಸಿದ್ದರೂ ಸಹ, ಭಾರತದ ಜನರು ನಿಮ್ಮ ವಿಡಿಯೋವನ್ನು ತೆಗೆದುಕೊಳ್ಳುತ್ತಾರೆ ಎಂದು ಸಹೋದರಿಯರು ಇನ್​ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಸಹೋದರಿಯರು ಹಂಚಿಕೊಂಡಿರುವ ವಿಡಿಯೋಗೆ ಕಾಮೆಂಟ್​ಗಳ ಸುರಿಮಳೆಯೇ ಹರಿದುಬಂದಿದೆ. ಕೆಲ ಭಾರತೀಯರು ಯುವತಿಯರಲ್ಲಿ ಕ್ಷಮೆಯಾಚಿಸಿದರೆ, ಇತರರು ಅವನನ್ನು ಸುಮ್ಮನೇ ಬಿಡಬಾರದಿತ್ತು, ನೀವು ಪೊಲೀಸ್ ದೂರು ದಾಖಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net