ಬಾಲಕರಿಬ್ಬರನ್ನು ರೇಪ್​ ಮಾಡಿ ಜೀವಂತ ಸಮಾಧಿ ಮಾಡಿದ ದುಷ್ಕರ್ಮಿಗಳು: ಇದರ ಹಿಂದಿದೆ ಡ್ರಗ್ಸ್​ ನಂಟು!

Boy
Published on

ಸ್ಟಾಕ್​ಹೋಮ್​: ಬಾಲಕರಿಬ್ಬರಿಗೆ ಕಿರುಕುಳ ನೀಡಿ ಅತ್ಯಾಚಾರಗೈದು ಜೀವಂತ ಸಮಾಧಿ ಮಾಡಿದ್ದಾರೆನ್ನಲಾದ ಘಟನೆ ಸ್ವಿಡನ್​ ನಿರ್ಜನ ಸ್ಮಶಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಆರೋಪಿಗಳನ್ನು 18 ಮತ್ತು 21 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದೆ. ಸ್ವೀಡನ್​ನ ಸೊಲ್ನಾದಲ್ಲಿ ಆಗಸ್ಟ್ 22ರಂದು ರಾತ್ರಿ 11 ಗಂಟೆಗೆ ಭೀಕರ ಘಟನೆ ನಡೆದಿದೆ. ಶಂಕಿತ ಆರೋಪಿಗಳು ಡ್ರಗ್ಸ್​ ಮಾರಾಟ ಮಾಡುವಂತೆ ಸಂತ್ರಸ್ತ ಬಾಲಕರಿಬ್ಬರಿಗೆ ಒತ್ತಾಯಿಸಿದ್ದಾರೆ. ಒಪ್ಪದಿದ್ದಾಗ ಬಾಲಕರಿಬ್ಬರನ್ನು ನಿರ್ಜನ ಸ್ಮಶಾನ ಜಾಗಕ್ಕೆ ಎಳೆದೊಯ್ದು ಕಿರುಕುಳ ನೀಡಿ, ತಲೆಗೆ ಹಲ್ಲೆ ಮಾಡಿ, ರೇಪ್​ ಮಾಡಿ ಜೀವಂತ ಸಮಾಧಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರ ನಿಖರ ವಯಸ್ಸು ಬಹಿರಂಗವಾಗಿಲ್ಲ. ಬಾಲಕರ ಬಟ್ಟೆಗಳನ್ನು ತೆಗೆದು ಅದನ್ನು ಸಮಾಧಿಯ ಪಕ್ಕದಲ್ಲೇ ಎಸೆದು ಜೀವಂತವಾಗಿ ಅವರಿಬ್ಬರನ್ನು ಹೂತಿದ್ದಾರೆ. ಈ ಭೀಕರ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಕೂಡಲೇ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲಿಸರು ಓಡಿಹೋಗುತ್ತಿದ್ದ ಇಬ್ಬರು ಶಂಕಿತ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಶಂಕಿತ ಆರೋಪಿಗಳಿಬ್ಬರು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ. ಆದರೆ, ಆರೋಪಿಗಳಿಬ್ಬರ ಬಗ್ಗೆ ಪೊಲೀಸರಿಗೆ ಚೆನ್ನಾಗಿ ತಿಳಿದಿದ್ದು, ಈ ಹಿಂದಿನ ಹಲವು ಅಪರಾಧ ಪ್ರಕರಣಗಳಲ್ಲಿ ಇಬ್ಬರು ಭಾಗಿಯಾಗಿದ್ದಾರೆ. ಸದ್ಯ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net